ಕುಂದಾಪುರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಎಂಬುವರ ಜೊತೆ ಶುಭ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಅನಿಮೇಶನ್ ಮಾಡಿದ್ದು ಜ್ಯೋತಿಷ್ಯ ಮತ್ತು ಪೌರೋಹಿತ್ಯದಲ್ಲಿ ತೊಡಗಿದ್ದಾರೆ. ಚೈತ್ರಾ ಮತ್ತು ಕಶ್ಯಪ್ 12 ವರ್ಷಗಳಿಂದ ಸ್ನೇಹಿತರು. ಚೈತ್ರಾ ಅವರು ಮದುವೆ ಆಗುವ ಹುಡುಗನ ಬಗ್ಗೆ ಎಲ್ಲಿಯೂ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ ಎನ್ನುವುದು ವಿಶೇಷತೆಯಾಗಿದೆ. ಆದರೆ ಮದುವೆಗೆ ಒಂದು ದಿನ ಮೊದಲು ಅವರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದರು.