ಬೆಳಗಾವಿ: ಶ್ರೀ ವೇದವ್ಯಾಸ ಜಯಂತಿ, ಶ್ರೀ ವಿದ್ಯಾಮಾನ್ಯ ತೀರ್ಥರ ಆರಾಧನಾ ಸೇವಾ ಸಮಿತಿ, ಶ್ರೀ ಭಂಡಾರ ಕೇರಿ ಮಠ ಹಾಗೂ ಶ್ರೀ ಕೃಷ್ಣ ಮಠಗಳ ವತಿಯಿಂದ ಮೇ 5 ರಿಂದ 11 ರವರೆಗೆ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀ ಪಾದಂಗಳವರ 25 ನೇ ಮಹಾಸಮಾರಾಧನೆ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಟಿಳಕವಾಡಿಯ ಶ್ರೀ ಕೃಷ್ಣ ಮಠ ಮತ್ತು ಕೆ ಎಲ್ ಎಸ್ ಗೋಗಟೆ ಕಾಲೇಜಿನ ಕೆ.ವೇಣುಗೋಪಾಲ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದಂಗಳವರ ಅಧ್ಯಕ್ಷತೆ ಮತ್ತು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರ 25 ನೇ ಮಹಾ ಸಮಾರಾಧನೆ, ಪೂಜ್ಯರ ಪೀಠಾರೋಹಣ ಶತಮಾನೋತ್ಸವ, ವೇದವ್ಯಾಸ ಜಯಂತಿ ಪ್ರಯುಕ್ತ ತತ್ಪ್ರ ಜ್ಞಾನ ಸತ್ರ, ಶಿಬಿರ, ವೇದವ್ಯಾಸ ನರಸಿಂಹ ಮಂತ್ರ ಹೋಮಗಳು, ನಾಡಿನ ಗಣ್ಯ ವಿದ್ವಾಂಸರಿಂದ ಆಧ್ಯಾತ್ಮಿಕ ಚಿಂತನೆ, ಉಪನ್ಯಾಸಗಳು, ನಗರದ ಭಜನಾ ಮಂಡಳಗಳಿಂದ ಭಜನೆ, ಶೋಭಾಯಾತ್ರೆ, ವಿದ್ವಾಂಸರಿಗೆ ಸನ್ಮಾನ, ಮಹಿಳಾ ಗೋಷ್ಠಿ, ಯುವ ಗೋಷ್ಠಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿದಿನ ಶ್ರೀ ಮನ್ಮಧ್ಯಾಚಾರ್ಯ ಕರಾರ್ಚಿತ ಶ್ರೀ ಸೀತಾಲಕ್ಷ್ಮಣ ಸಹಿತ ಶ್ರೀರಾಮದೇವರ ಸಂಸ್ಥಾನ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೋರಲಾಗಿದೆ. ಮಾಹಿತಿಗೆ ಶ್ರೀನಿವಾಸ ಆಚಾರ್ಯ ಹೊನ್ನಿದಿಬ್ಬ 9886457735,
ಎಂ.ಜಿ. ಭಟ್ 9986779878 ಇವರನ್ನು ಸಂಪರ್ಕಿಸಬಹುದು.