ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೋಜಗಾ, ಕೋವಾಡ್, ಹಿಂಡಲಗಾ, ಮಣ್ಣೂರ್ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣದ ಕಾಮಗಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ರಸ್ತೆಯ ಗುಣಮಟ್ಟ ಕಾಪಾಡಲು ಗುತ್ತಿಗೆದಾರರಿಗೆ ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಯುವರಾಜ ಕದಂ, ಮಲ್ಲಪ್ಪ ಗಾವಡೆ, ಜಯವಂತ ಸಾವಂತ, ಗಜಾನನ ಮೋರೆ, ನಾರಾಯಣ ಬೆಳಗಾಂವ್ಕರ್, ಅರುಣ ಗಾವಡೆ, ಕೃಷ್ಣ ಖಾದರವಾಡ್, ಗಾವಡು ಗಾವಡೆ, ಅರುಣ ಬೋಗನ್, ಜ್ಞಾನೇಶ್ವರ ಕೋಳಿ, ಸೋಮನಾಥ್ ಭಡಂಗೆ, ರಾಮಾ ಕುಮಾರಿಕರ್ ಮುಂತಾದವರು ಉಪಸ್ಥಿತರಿದ್ದರು.