ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾಕರಿಂದ ನಡೆದ ಪ್ರವಾಸಿಗರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಗುರುತಿಸಿದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರಲ್ಲಿ ಒಬ್ಬನಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ನನ್ನು ಪಾಕಿಸ್ತಾನ ಸೇನೆಯು ಲಷ್ಕರ್-ಎ-ತೈಬಾ (ಎಲ್ಇಟಿ) ಗೆ ‘ಎರವಲು’ ನೀಡಿದೆಯೇ?
ಮೂಸಾ ಪಾಕಿಸ್ತಾನದ ಪ್ಯಾರಾ ವಿಶೇಷ ಪಡೆಯಲ್ಲಿ ಸೇವೆ ಸಲ್ಲಿಸಿದ್ದಾನೆ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಪರಿಣಿತ ಎಂದು ಹೇಳಲಾಗಿದೆ. ಆದರೆ ಪಾಕಿಸ್ತಾನ ಸೇನೆಯಿಂದ ಹೊರಹಾಕಲ್ಪಟ್ಟ ನಂತರ ಆತ ಎಲ್ಇಟಿಗೆ ಸೇರಿದ್ದಾನೋ ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂತಹ ದಾಳಿಗಳನ್ನು ನಡೆಸಲು ನಿಷೇಧಿತ ಭಯೋತ್ಪಾದಕ ಸಂಘಟನೆಗೆ ಆತನನ್ನು ಕಳುಹಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪಹಲ್ಗಾಮ್ ದಾಳಿಯ ನಂತರ ಬಿಡುಗಡೆಯಾದ ಮೂವರು ಭಯೋತ್ಪಾದಕರ ರೇಖಾಚಿತ್ರಗಳಲ್ಲಿ ಮೂಸಾ ಭಾವಚಿತ್ರವೂ ಇದೆ. ಆತ ಪಾಕಿಸ್ತಾನ ಸೇನೆಯ ವಿಶೇಷ ಸೇವಾ ಗುಂಪಿನಲ್ಲಿ (SSG) ಸೇವೆ ಸಲ್ಲಿಸಿದ್ದಾನೆ ಎಂಬುದನ್ನು ಪಾಕಿಸ್ತಾನ ನಿರಾಕರಿಸಿಲ್ಲ. ಆತ ಇತರ ಎಲ್ಇಟಿ ಭಯೋತ್ಪಾದಕರೊಂದಿಗೆ ಹೇಗೆ ಸೇರಿಕೊಂಡನು ಎಂಬುದು ಈಗ ಮೂಡಿರುವ ಪ್ರಶ್ನೆ.
ಆತನನ್ನು ಎಸ್ಎಸ್ಜಿಯಿಂದ ವಜಾಗೊಳಿಸಿದ ನಂತರ ಆತನೇ ಎಲ್ಇಟಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾನೆಂದು ಪಾಕಿಸ್ತಾನ ಜಗತ್ತನ್ನು ನಂಬಿಸಿತ್ತು. ಭಯೋತ್ಪಾದಕ ದಾಳಿಯ ನಂತರ ವಶಕ್ಕೆ ಪಡೆದ 14 ಓವರ್ ಗ್ರೌಂಡ್ ವರ್ಕರ್ಸ್ (OGWs) ವಿಚಾರಣೆ ನಡೆಸಿದ ನಂತರ ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನದ ಈ ವಾದ ಮನವರಿಕೆಯಾಗಿಲ್ಲ.
ಗ್ರೌಂಡ್ ವರ್ಕರ್ಸ್ (OGWs) ಪ್ರಕಾರ, ಮೂಸಾಗೆ ಎಲ್ಇಟಿ ಸೇರಿ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಕಾರ್ಯಾಚರಣೆಯನ್ನು ಮುನ್ನಡೆಸುವಂತೆ ಆದೇಶಿಸಿದಾಗ ಆತ ಎಸ್ಎಸ್ಜಿಯಲ್ಲಿ ಸೇವೆಯಲ್ಲಿದ್ದ. ಶತ್ರು ಪ್ರದೇಶದಲ್ಲಿ ಇಂತಹ ರಹಸ್ಯ ಕಾರ್ಯಾಚರಣೆಗಳನ್ನು ನಡೆಸಲು ಆತನಿಗೆ ವಿಶೇಷ ತರಬೇತಿ ನೀಡಲಾಗಿದೆ.
“ಪಾಕಿಸ್ತಾನದ ಮಿಲಿಟರಿ ಸಂಸ್ಥೆಯು ಮೂಸಾನನ್ನು ತಂಡವನ್ನು ಮುನ್ನಡೆಸಲು ಮತ್ತು ಬದುಕುಳಿಯುವ ಕೌಶಲ್ಯಗಳು, ಸುಧಾರಿತ ಶಸ್ತ್ರಾಸ್ತ್ರಗಳ ನಿರ್ವಹಣೆ, ಸ್ಫೋಟಕಗಳು, ಸಂಚರಣ ಸಾಧನಗಳಂತಹ ಉಪಕರಣಗಳು ಮತ್ತು ದೈಹಿಕ ಯುದ್ಧದಲ್ಲಿ ತರಬೇತಿ ನೀಡಲು ಸ್ಪಷ್ಟವಾಗಿ ನಿಯೋಜಿಸಿತ್ತು. ಇದು ಸಂಭವಿಸುವುದನ್ನು ನಾವು ನೋಡುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಗಳ ಸಮಯದಲ್ಲಿ ಪಾಕಿಸ್ತಾನದ ಗಡಿ ಕಾರ್ಯಾಚರಣಾ ತಂಡದ (ಬಿಎಟಿ) ಸಿಬ್ಬಂದಿಯ ಪಾತ್ರವನ್ನು ನಾವು ನೋಡಿದ್ದೇವೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯ ಸೈನಿಕರು ಭಯೋತ್ಪಾದಕರ ಜೊತೆ ಸೇರಿ ಹೋರಾಡುವುದನ್ನು ನಾವು ನೋಡಿದ್ದೇವೆ” ಎಂದು ಹಿರಿಯ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಸಾ ಸೆಪ್ಟೆಂಬರ್ 2023 ರಲ್ಲಿ ಭಾರತಕ್ಕೆ ನುಸುಳಿದ್ದಾನೆ ಎಂದು ಶಂಕಿಸಲಾಗಿದೆ. ಆಗ ಆತನ ಕಾರ್ಯಾಚರಣೆಯ ಪ್ರದೇಶವು ಶ್ರೀನಗರದ ಸುತ್ತಮುತ್ತಲಿನ ಬುಡ್ಗಾಮ್ ಜಿಲ್ಲೆಯಾಗಿತ್ತು. 2024 ರಲ್ಲಿ ಕಣಿವೆಯಲ್ಲಿ ನಡೆದ ಕನಿಷ್ಠ ಮೂರು ಭಯೋತ್ಪಾದಕ ದಾಳಿಗಳಲ್ಲಿ ಆತ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ, ಇದರಲ್ಲಿ ಸ್ಥಳೀಯರಲ್ಲದವರ ಹತ್ಯೆಯೂ ಸೇರಿದೆ. ಪಹಲ್ಗಾಮ್ನ ಬೈಸರನ್ ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೂ ಮುನ್ನ ಬೈಸರನ್ ಹುಲ್ಲುಗಾವಲಿನ ವೀಕ್ಷಣೆಗೆ ಆತ ತಮ್ಮ ‘ತಂಡ’ವನ್ನು ಕರೆದುಕೊಂಡು ಹೋಗಿದ್ದ ಎಂದು ಗ್ರೌಂಡ್ ವರ್ಕರ್ಸ್ (OGWs) ತಿಳಿಸಿದ್ದಾರೆ.
ಮೂಸಾನನ್ನು ಜೀವಂತವಾಗಿ ಹಿಡಿಯಲು ಈಗ ಪ್ರಯತ್ನಗಳು ನಡೆಯುತ್ತಿವೆ, ಅದು ಕಷ್ಟಕರವಾಗಬಹುದು. ಬಹುಶಃ ಅದಕ್ಕಾಗಿಯೇ, ಭಯೋತ್ಪಾದಕರನ್ನು ಬೆನ್ನಟ್ಟುತ್ತಿದ್ದ ಭದ್ರತಾ ಪಡೆಗಳು, ಸಂಪರ್ಕಕ್ಕೆ ಬಂದ ನಂತರವೂ, ಕೆಲವು ಸಂದರ್ಭಗಳಲ್ಲಿ ಆತನ ಮೇಲೆ ಗುಂಡು ಹಾರಿಸಲು ಹಿಂಜರಿದಿದ್ದಾರೆ. ಆತನ ಸೆರೆಹಿಡಿಯುವಿಕೆಯು ಇಡೀ ಪ್ರಕರಣದಲ್ಲಿ ಪಾಕಿಸ್ತಾನದ ಭಾಗಿಯಾಗುವಿಕೆಯನ್ನು ಪ್ರಪಂಚದ ಮುಂದೆ ಬಹಿರಂಗಪಡಿಸುತ್ತದೆ. ಇದಕ್ಕಾಗಿ ಆತನನನ್ನು ಜೀವಂತವಾಗಿ ಸೆರೆ ಹಿಡಿಯುವುದು ಸೇನೆಗೆ ಅತಿಮುಖ್ಯವಾಗಿದೆ. ಆತ ಸೆರೆ ಸಿಕ್ಕರೆ ಪಾಕಿಸ್ತಾನದ ನಿಜವಾದ ಬಣ್ಣ ಪ್ರಪರಂಚದ ಮುಂದೆ ಬಯಲಾಗುತ್ತದೆ. ಹೀಗಾಗಿ ಸೇನೆ ಆತನನ್ನು ಜೀವಂತವಾಗಿ ಸೆರೆ ಹಿಡಿಯಲು ಶತಾಯ ಗತಾಯ ಪ್ರಯತ್ನಿಸುತ್ತಿದೆ.ಇದು