ಬೆಳಗಾವಿ : ನಗರದ ಪ್ರೇರಣಾ ಪದವಿ ಪೂರ್ವ ಕಾಲೇಜು 2024 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಶೇಕಡ 99% ವಾಣಿಜ್ಯ ವಿಭಾಗ, ಶೇಕಡ 95 % ರಷ್ಟು ವಿಜ್ಞಾನ ವಿಭಾಗದಲ್ಲಿ ಫಲಿತಾಂಶ ದಾಖಲಿಸಿದೆ .
ವಿಜ್ಞಾನ ವಿಭಾಗದಲ್ಲಿ 75 ವಿದ್ಯಾರ್ಥಿಗಳಲ್ಲಿ 38 ವಿಶಿಷ್ಟ ಶ್ರೇಣಿ ಮತ್ತು 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ
ವಾಣಿಜ್ಯ ವಿಭಾಗದಲ್ಲಿ 78 ವಿದ್ಯಾರ್ಥಿಗಳಲ್ಲಿ 16 ವಿಶಿಷ್ಟ ಶ್ರೇಣಿ ಮತ್ತು 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ
ವಿಜ್ಞಾನ ವಿಭಾಗದಲ್ಲಿ ಕುಮಾರಿ ಖುಷಿ ಹುಗ್ಗಿ 581ಅಂಕ ( 96.83 % ) ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ , ಕುಮಾರಿ ಶ್ರೇಯಾ ದೊಡ್ಡ ತಮ್ಮಾ 578 ಅಂಕ ( 96.33% ) ಗಳಿಸಿ ದ್ವಿತೀಯ ಸ್ಥಾನ, ಹಾಗೂ ಕುಮಾರ ಸಿದ್ದಾರ್ಥ ಗಚ್ಚಿ 563 ಅಂಕ ( 93.83%)ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ
ವಾಣಿಜ್ಯ ವಿಭಾಗದಲ್ಲಿ ಕುಮಾರಿ ವೈಷ್ಣವಿ ಪಿ 564 ಅಂಕ( ಶೇಕಡಾ 94 % )ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ, ಕುಮಾರಿ ಗೌತಮಿ ಎಚ್ 560 ಅಂಕ ( ಶೇಕಡ 93 .33 % ) ಗಳಿಸಿ ದ್ವಿತೀಯ ಸ್ಥಾನ ಹಾಗೂ ಕುಮಾರಿ ಹೃತಿಕಾ ಎಚ್ 559 ಅಂಕ ( ಶೇಕಡ 93.16% )ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮೆಚ್ಚಿ ಸಂಸ್ಥೆಯ ಮುಖ್ಯಸ್ಥ ಗಿರೀಶ ದಂಡನ್ನವರ, ಅಮಿತ ವಾಗರಾಳಿ,ಪ್ರಾಚಾರ್ಯ ಪ್ರಶಾಂತ ಗೌಡರ, ಶೈಕ್ಷಣಿಕ ಸಂಯೋಜಕಿ ಜ್ಯೋತಿ ಜಾಧವ ಮತ್ತು ಸಮಸ್ತ ಉಪನ್ಯಾಸಕ ವೃಂದ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.