ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ಗೋಗಟೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತನ್ವಿ ಪಾಟೀಲ ಅವರು, 600ಕ್ಕೆ 597 ಅಂಕ ಗಳಿಸಿದರು. ಈ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಬ್ಯಾಂಕ್ ಗಳಿಸಿದ್ದಾರೆ.
ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಶಾಸ್ತ್ರ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ವಿಷಯಗಳಲ್ಲಿ ತಲಾ 100 ಮತ್ತು ಇಂಗ್ಲಿಷ್ನಲ್ಲಿ 97 ಅಂಕ ಗಳಿಸಿದ್ದಾರೆ. ಹಿಂದಿಯಲ್ಲಿ 100 ಅಂಕ ಗಳಿಸಿದ್ದಾರೆ.