ಬೆಳಗಾವಿ : ಕೆ. ಎಲ್. ಇ.ಸಂಸ್ಥೆಯ ಬಿ. ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯ, ಬೆಳಗಾವಿ. ದಿನಾಂಕ 26/03/2025 ರಂದು ಅಧಿನಿಯಮ ದರ್ಶನ ಎಂಬ ವಿನೂತನ ಕಾನೂನು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ರಾಜ್ಯದ 20ಕ್ಕೂ ಹೆಚ್ಚು ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಹಾಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನಿರ್ಣಾಯಕರಾಗಿ ಭಾಗವಹಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನ್ಯಾಯವಾದಿ ಪಿ.ಎಫ್. ಗೌಡರ,
ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ನಡೆಸಿ ವೃತ್ತಿಪರ ಕೌಶಲ್ಯಗಳನ್ನು ರೂಢಿಸಿಕೊಂಡು ಉತ್ಕೃಷ್ಟ ನ್ಯಾಯವಾದಿಗಳಾಗಿ ಹೊರಹೊಮ್ಮಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿ. ಜಿ. ಪಾಟೀಲ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ ಎಸ್. ಎಸ್. ಹಾಗೂ ಟಿ.ಪಿ.ಎಸ್. ವಿಜ್ಞಾನ ಮಹಾವಿದ್ಯಾಲಯ, ಸಂಕೇಶ್ವರ ನಿರ್ಣಾಯಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ, ಬೆಳಗಾವಿಯ ಹಿರಿಯ ನ್ಯಾಯವಾದಿ ಆರ್. ಬಿ. ಬೆಲ್ಲದ ವಹಿಸಿ ಮಾತನಾಡಿ, ಕೆ.ಎಲ್.ಇ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಎಲ್ಲ ಕ್ಷೇತ್ರದಲ್ಲಿಯೂ ಉತ್ಕೃಷ್ಟ ಸೇವೆಗಳನ್ನು ಒದಗಿಸಿ ಗುಣಾತ್ಮಕ ಶಿಕ್ಷಣವನ್ನು ಒದಗಿಸುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಕಾನೂನು ಕ್ಷೇತ್ರದಲ್ಲಿ ನಿರಂತರವಾಗಿ 50 ವರ್ಷಗಳಿಂದ ಉತ್ಕೃಷ್ಟ ಕಾನೂನು ಶಿಕ್ಷಣವನ್ನು ಒದಗಿಸುತ್ತಿರುವ ಬಿ. ವ್ಹಿ. ಬೆಲ್ಲದ ಕಾನೂನು ಮಹಾವಿದ್ಯಾಲಯವು ನಿರಂತರವಾಗಿ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲ್ಯ ವೃದ್ಧಿಗೊಳಿಸಲು ಅಣಕು ನ್ಯಾಯಾಲಯ, ಪಕ್ಷಗಾರರೊಂದಿಗೆ ಸಮಾಲೋಚನೆ, ಚರ್ಚಾ ಕೂಟ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಕಾರ್ಯಗಾರಗಳು ಮತ್ತು ಉಪನ್ಯಾಸಗಳನ್ನು ಆಯೋಜಿಸುತ್ತಿದ್ದು ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಉತ್ಕೃಷ್ಟ ನ್ಯಾಯವಾದಿಗಳಾಗಿ ಹೊರಹೊಮ್ಮಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಪ್ರಾಚಾರ್ಯೆ ಜ್ಯೋತಿ ಹಿರೇಮಠ ಉಪಸ್ಥಿತರಿದ್ದರು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಾದರಿ ತಯಾರಿಕೆ ಸ್ಪರ್ಧೆ :
1) ಕೆ ಎಲ್ ಇ ಸೊಸೈಟಿಯ ಜಿ ಕೆ ಕಾನೂನು ಕಾಲೇಜು ಹುಬ್ಬಳ್ಳಿ, 2) ಕೆ ಪಿಇ ಎಸ್ ಕಾನೂನು ಕಾಲೇಜು ಧಾರವಾಡ, 3) ಎಚ್ ಸಿ ಇ ಎಸ್ ಕಾನೂನು ಕಾಲೇಜು ಗದಗ
ಚಾರ್ಟ್ ಮೇಕಿಂಗ್ ಸ್ಪರ್ಧೆ:
1) ಹುರಕಡ್ಲಿ ಅಜ್ಜ ಕಾನೂನು ಕಾಲೇಜು ಧಾರವಾಡ, 2) ಎಸ್ .ಸಿ. ನಂದಿಮಠ ಕಾನೂನು ಕಾಲೇಜು ಬಾಗಲಕೋಟೆ, 3) ಜಿ ಕೆ ಕಾನೂನು ಕಾಲೇಜು ಹುಬ್ಬಳ್ಳಿ.