ಬೆಳಗಾವಿ: ಬೆಳಗಾವಿ ಆರ್ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠ ಮತ್ತು ಸಭಾಭವನದಲ್ಲಿ ಮಾರ್ಚ್ 29 ರಂದು ರಾತ್ರಿ 9:43ಕ್ಕೆ ಶನಿ ಮೀನರಾಶಿಗೆ ಪ್ರವೇಶಿಸುವ ನಿಮಿತ್ತ
ಅಂದು ಬೆಳಿಗ್ಗೆ ಪೂಜೆ ಬೆಳಿಗ್ಗೆ 9 ರಿಂದ 12 ರ ವರೆಗೆ ಶ್ರೀ ಶನಿ ಶಾಂತಿಯ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಮೇಷ, ಸಿಂಹ, ವೃಶ್ಚಿಕ, ಕುಂಭ, ಮೀನ ರಾಶಿಯವರು ಶನಿ ಶಾಂತಿ ಮಾಡಿಸಬೇಕಾಗಿದ್ದು ಭಕ್ತರು ಇದರ ಸದುಪಯೋಗ ಪಡೆಯಬಹುದು. ಸಾಮೂಹಿಕ ಶನಿ ಶಾಂತಿ ಹಮ್ಮಿಕೊಳ್ಳಲಾಗಿದ್ದು ಭಕ್ತರಿಗಾಗಿ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣಮಠದ ಕೃಷ್ಣ ದೇವರ ಸನ್ನಿಧಿಯಲ್ಲಿ ಶನಿಶಾಂತಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ಮೊ: 9886457735 ಮತ್ತು ಎಂ.ಜಿ. ಭಟ್, ಮೊ : 9986779878 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.