ಬೆಳಗಾವಿ: ಬೆಳಗಾವಿ ಆರ್ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಏಪ್ರಿಲ್ 1 ರಿಂದ 6 ರವರೆಗೆ ಪ್ರತಿದಿನ ಮಧ್ಯಾಹ್ನ 2:30 ರಿಂದ 5:30ರ ವರೆಗೆ ಧಾರ್ಮಿಕ ವಸಂತ ಶಿಬಿರವನ್ನು ಆಯೋಜಿಸಲಾಗಿದೆ. ಅಖಿಲ ಭಾರತ ಮಾಧ್ವ ಮಹಾಮಂಡಲ ಮತ್ತು ಪೇಜಾವರ ಮಠ-ಉಡುಪಿ ಹಾಗೂ ಶ್ರೀ ಕೃಷ್ಣ ಮಠ- ಸಭಾಭವನ ಬೆಳಗಾವಿ ಮತ್ತು ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.
*ರಾಮಾಯಣ ಪ್ರವಚನ :*
ಏಪ್ರಿಲ್ 1 ರಿಂದ 6 ರವರೆಗೆ ಸಂಜೆ 6 ರಿಂದ 7:30 ರ ವರೆಗೆ ರಾಮನವಮಿ ಉತ್ಸವ ಪ್ರಯುಕ್ತ ಮೈಸೂರಿನ ವಿದ್ವಾನ್ ಡಾ.ಬೆ.ನಾ.ವಿಜಯೀಂದ್ರಾಚಾರ್ಯಚಾರ್ಯ ಇವರಿಂದ ರಾಮಾಯಣ ಪ್ರವಚನ ಮಾಲಿಕೆ ಭಾಗ-10 ಪ್ರವಚನ ಏರ್ಪಡಿಸಲಾಗಿದೆ ಎಂದು ಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ ಮೊ: 9886457735 ಮತ್ತು ಎಂ.ಜಿ. 9986779878 ಇಲ್ಲಿಗೆ ಸಂಪರ್ಕಿಸುವಂತೆ ಕೋರಲಾಗಿದೆ.