ಭಾರತದ ಪುಣ್ಶಭೂಮಿಯಲ್ಲಿ ಹಲವಾರು ಧರ್ಮಗಳು ಜನ್ಮ ಪಡೆದು ಮಾನವರ ಐಹಿಕ ಉದ್ಧಾರಕ್ಕೆ ಮತ್ತು ಅಲೌಕಿಕ ಪ್ರಾಪ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಧರ್ಮಗಳ ಸಂಗಮವಾಗಿರುವ ಯೋಗ ತ್ಶಾಗದ ನಾಡು ಈ ನಮ್ಮ ದೇಶದಲ್ಲಿ ವೀರಶೈವ ಧರ್ಮವು ತನ್ನ ವಿಶಿಷ್ಠ ವಿಚಾರಧಾರೆ ಅರ್ಥಪೂರ್ಣ ಶಿಷ್ಠ ಆಚಾರ ಸಂಹಿತೆಯಿಂದಾಗಿ ಬುದ್ಧಿಜೀವಿಗಳ ಹಾಗೂ ಭಾವನಾ ಜೀವಿಗಳ ಗಮನವನ್ನು ವಿಶ್ವಮಟ್ಟದಲ್ಲಿ ಸೆಳೆದಿದೆ. ಆಚಾರ ವಿಚಾರಗಳ ಸಮನ್ವಯ ಸಂಗಮದಂತಿರುವ ವೀರಶೈವ ಧರ್ಮ ಸಂಸ್ಥಾಪನೆಯ ಕೀರ್ತಿ ಆದಿಜಗದ್ಗುರು ಶ್ರೀರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ.
ಜಗತ್ತಿನ ಕಲ್ಶಾಣಕ್ಕಾಗಿ ಶಿವನ ಅಣತಿಯಂತೆ ದ್ವಾಪರ ಯುಗದಲ್ಲಿ ಪರಶಿವನ ಸದ್ಶೋಜಾತ ಮುಖಸಂಜಾತರಾದ ಶ್ರೀಜಗದ್ಗುರು ರೇಣುಕಾಚಾರ್ಯರು ತೆಲಂಗಾಣದ ಕೊಲನುಪಾಕಿ ಸುಕ್ಷೇತ್ರದ ಶ್ರೀಸೋಮೇಶ್ವರ ಮಹಾಲಿಂಗದಿಂದ ಪಾಲ್ಗುಣ ಶುದ್ಧ ತ್ರಯೋದಶಿಯಂದು ಪ್ರಾದುರ್ಭವಿಸಿದರು. ಕೃತಯುಗದಲ್ಲಿ ಶ್ರೀಜಗದ್ಗುರು ಏಕಾಕ್ಷರ ಶಿವಾಚಾರ್ಯರಾಗಿ ತ್ರೇತಾಯುಗದಲ್ಲಿ ಶ್ರೀಜಗದ್ಗುರು ಏಕವಕ್ರ ಶಿವಾಚಾರ್ಯರಾಗಿ ದ್ವಾಪರಯುಗದಲ್ಲಿ ಶ್ರೀಜಗದ್ಗುರು ರೇಣುಕಾಚಾರ್ಯರಾಗಿ ಕಲಿಯುಗದಲ್ಲಿ ಶ್ರೀಜಗದ್ಗುರು ರೇವಣಸಿದ್ಧರಾಗಿ ಅವತರಿಸಿ ವೀರಶೈವ ಧರ್ಮ ಸಂಸ್ಥಾಪಕರಾಗಿ ಯುಗಪ್ರವರ್ತಕರಾಗಿ ಧರ್ಮ ಸಂರಕ್ಷಣೆಗಾಗಿ ಜಗದಲ್ಲಿ ಶಿವಜ್ಞಾನದ ಬೆಳಕನ್ನು ಬೀರಿದರು. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಕೀರ್ತಿ ಶ್ರೀಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ.
ಅಗಸ್ತ್ಯರಿಗೆ ವೀರಶೈವ ರಹಸ್ಯ ಬೋಧನೆ: ಸಪ್ತ ಸಮುದ್ರದ ನೀರನ್ನು ಪಾನಮಾಡಿದ ವಾತಾಪಿ ಇಲ್ವಲ ರಾಕ್ಷಸರನ್ನು ಸಂಹರಿಸಿದ ವಿಂದ್ಯ ಪರ್ವತದ ದುರಂಹಕಾರವನ್ನು ನಾಶಗೊಳಿಸಿದ ಮಹಾಜ್ಞಾನಿಯಾದ ಅಗಸ್ತ್ಯ ಮಹರ್ಷಿಗಳಿಗೆ ವೀರಶೈವ ಧರ್ಮದ ಪರಮ ರಹಸ್ಯವಾದ ಶಕ್ತಿವಿಶಿಷ್ಠಾಧ್ವೈತ ಸಿದ್ಧಾಂತವನ್ನು ಬೋಧಿಸಿದ ಸಾರವೇ ಶ್ರೀಸಿದ್ಧಾಂತ ಶಿಖಾಮಣಿಯಾಗಿದೆ. ಶ್ರೀಶಿವಯೋಗಿ ಶಿವಾಚಾರ್ಯರಿಂದ ರಚಿತವಾದ ವೀರಶೈವ ಸಿದ್ಧಾಂತವನ್ನು ಪ್ರತಿಪಾದಿಸುವ ಮಹಾಗ್ರಂಥವಾಗಿದೆ. ಪಂಚಾಚಾರ ಷಟ್ ಸ್ಥಲ ತತ್ವಗಳನ್ನೊಳಗೊಂಡ ನೂರೊಂದು ಸ್ಥಲಗಳು ಇದರಲ್ಲಿ ನಿರೂಪಿತವಾಗಿದ್ದು ಜೀವನ ದರ್ಶನದ ಹೆಜ್ಜೆಗಳನ್ನು ಈ ಶ್ರೇಷ್ಠ ಗ್ರಂಥದಲ್ಲಿ ಪಡೆಯಬಹುದು. ಶ್ರೀಜಗದ್ಗುರು ರೇಣುಕರ ಮುಖಕಮಲದಿಂದ ಹರಿದು ಹೊರಬಂದ ಆ ಪವಿತ್ರ ತಪೋಭೂಮಿಯೇ ಬಾಳೆಹೊನ್ನೂರಿನ ಶ್ರೀರಂಭಾಪುರಿ ವೀರಸಿಂಹಾಸನಾ ಮಹಾಪೀಠವಾಗಿ ವೀರಶೈವ ಧರ್ಮಕ್ಷೇತ್ರವಾಗಿ ವೀರಗೋತ್ರಜರ ಆರಾಧ್ಯ ಸ್ಥಳವಾಗಿ ಜ್ಞಾನ ಗಂಗೋತ್ರಿಯಾಗಿ ಭದ್ರಾನದಿ ತಟದಲ್ಲಿ ನೆಲೆಗೊಂಡಿದೆ.
ಶ್ರೀಜಗದ್ಗುರು ರೇಣುಕಾಚಾರ್ಯರು ತಮ್ಮ ಉಗಮಕ್ಕೆ ಅಂಗವನ್ನು ಮುಖವಾಗಿಸಿಕೊಳ್ಳಲಿಲ್ಲ. ಲಿಂಗವನ್ನು ಮುಖವಾಗಿಸಿಕೊಂಡರು. ಆದ್ದರಿಂದಲೇ ಅವರು ಅಂಗೋದ್ಭವರಲ್ಲ ಲಿಂಗೋದ್ಭವರಾಗಿದ್ದಾರೆ. ಅವರದು ದೇಹ ಸೃಷ್ಠಿಯಲ್ಲ, ದೇವ ಸೃಷ್ಠಿಯಾಗಿರುವುದರಿಂದ ಲೌಕಿಕರನ್ನು ಆಶೀರ್ವದಿಸುವ ಧರ್ಮಗುರುಗಳಾಗಿದ್ದಾರೆ. ಧರ್ಮಧ್ವಜವನ್ನು ಹಿಡಿದು ದಂಡ ಕಮಂಡಲುಧಾರಿಗಳಾಗಿ ಕೊಲನುಪಾಕಿಯಲ್ಲಿಯೇ ನೆಲೆ ನಿಂತುಕೊಳ್ಳದೇ ನಾಡಿನ ತುಂಬೆಲ್ಲಾ ಸಂಚರಿಸಿ ಪತಿತರನ್ನು ಪಾವನಿಸುತ್ತಾ ಪಾಮರರನ್ನು ಪರಮಾರ್ಶಿಸುತ್ತಾ ಪಾಪಾತ್ಮರನ್ನು ಪುಣ್ಶಾತ್ಮರನ್ನಾಗಿಸುತ್ತಾ ಮಾನವೀಯತೆಯ ಕಲ್ಯಾಣದ ಕಹಳೆಯನ್ನು ಊದಿ ಶಿವದುಂದುಭಿಯನ್ನು ಮೊಳಗಿಸಿ ಧಾರ್ಮಿಕ ಕ್ಷಿತಿಜವನ್ನು ವಿಸ್ತಾರಗೊಳಿಸಿದ ಮಹಾತ್ಮರಾಗಿದ್ದಾರೆ.
ದಲಿತೋದ್ಧಾರ ಕಾರ್ಯಕ್ಕೆ ನಾಂದಿ: ಶ್ರೀಜಗದ್ಗುರು ರೇಣುಕರು ತಮ್ಮ ಜೀವನವನ್ನು ಬರೀ ಧಾರ್ಮಿಕ ಕ್ರಾಂತಿಗೆ ಮಾತ್ರ ಮೀಸಲಿಡದೇ ಸಾಮಾಜಿಕ ಕ್ರಾಂತಿಗೆ ಪರಿವರ್ತಿಸಿದರು. ಪೌರಾಣಿಕ ವರ್ಚಸ್ಸಿನಲ್ಲಿ ಬಂಧಿತನಾಗಿದ್ದ ಅಗಸ್ತ್ಯ ಮಹರ್ಷಿಗೆ ಜ್ಞಾನದೀಕ್ಷೆ ನೀಡಿ ಆಧ್ಶಾತ್ಮಿಕ ವರ್ಚಸ್ಸನ್ನು ಕರುಣಿಸಿ ಅಂದೇ ದಲಿತೋದ್ಧಾರ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ. ಅಲ್ಲದೇ ವಿಭೀಷಣನ ಪ್ರಾರ್ಥನೆಗೆ ಕಟಿಬದ್ಧರಾಗಿ ನವಕೋಟಿಲಿಂಗ ಸ್ಥಾಪನೆಯ ಸಂಕಲ್ಪ ಹೊಂದಿದ್ದ ರಾವಣನ ಜೀವನವನ್ನು ಕೃತಾರ್ಥಗೊಳಿಸುವ ನಿಟ್ಟಿನಲ್ಲಿ ಏಕಕಾಲಕ್ಕೆ ಮೂರುಕೋಟಿ ಗುರುರೂಪ ಧರಿಸಿ ಮೂರುಕೋಟಿ ಶಿವಲಿಂಗಗಳನ್ನು ಸ್ಥಾಪಿಸುವ ಮೂಲಕ ರಾವಣನಿಗೆ ಅಂಟಿಕೊಂಡಿದ್ದ ಅಸುರ ಸಾರ್ವಭೌಮ ಪಟ್ಟವನ್ನು ಅಳಿಸಿ ಭಕ್ತಸಾರ್ವಭೌಮನನ್ನಾಗಿ ಪರಿವರ್ತಿಸಿ ಆತನಿಗಿರುವ ಲಿಂಗನಿಷ್ಠೆ ಶಿವಭಕ್ತಿಯನ್ನು ಜಗಜ್ಜಾಹೀರಗೊಳಿಸಿದ ಯುಗಪುರುಷರಾಗಿದ್ದಾರೆ. ಈ ಅದ್ಭುತ ಶಿವಲೀಲೆಯ ಕುರುಹುವನ್ನು ಶ್ರೀಲಂಕಾ ದೇಶದ ಜಾಫ್ನಾ ಸಮೀಪದ ಕಿರುಮಲೈ ಎಂಬ ಗ್ರಾಮದಲ್ಲಿ ರೇಣುಕಾಶ್ರಮ ರೇಣುಕವನ ಮಠಗಳು ಹಾಗೂ ಶಿವಲಿಂಗಗಳನ್ನು ಇಂದಿಗೂ ಕಾಣಬಹುದು. ಈ ಬಗ್ಗೆ ಖ್ಶಾತ ಸಂಶೋಧಕ ಡಾ. ಶ್ರೀ ಚಿದಾನಂದಮೂರ್ತಿಯವರು ಸಂಶೋಧಿಸಿದ ಅಧಿಕೃತ ನಿದರ್ಶನಗಳಿವೆ.
ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಗೊಂಡು ವೀರಶೈವ ಧರ್ಮ ಕೇಂದ್ರಗಳು ಭೂರುದ್ರ ಭಕ್ತ ಸಂಘಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ, ಬಡ ಜನರ ಉದ್ಧಾರ, ರೈತ ಸಮುದಾಯದ ಬಗ್ಗೆ ಕೈಗೊಂಡ ನಿರ್ಣಯಗಳು ಅವರಿಗಿರುವ ಸಾಮಾಜಿಕ ಕಾಳಜಿಯನ್ನು ಎತ್ತಿಹಿಡಿದಿವೆ. ಸರ್ವ ಸಮುದಾಯದವರೂ ಶ್ರೇಷ್ಠ ಶಿವಜ್ಞಾನ ಪಡೆಯಲು ಹದಿನೆಂಟು ಮಠಗಳನ್ನು ಕೊಲನುಪಾಕಿಯಲ್ಲಿ ಕಟ್ಟಿಸಿ ಸಮಾನತೆಯನ್ನು ಸಾರಿದ ಹರಿಕಾರರಾಗಿದ್ದಾರೆ. ಜೀವ ಶಿವನಾಗುವ ಮಾನವ ಮಹಾದೇವನಾಗುವ ನಿಟ್ಟಿನಲ್ಲಿ ಅಂತರಂಗ ಬಹಿರಂಗ ಶುದ್ಧಿಗೆ ಆಧ್ಯತೆಯನ್ನು ನೀಡಿ ಶಿವಾಧ್ವೈತ ಸಿದ್ಧಾಂತವನ್ನು ಕೆಳವರ್ಗದ ಮಹರ್ಷಿಗಳಾದ ಅಗಸ್ತ್ಯರನ್ನು ಮೊದಲ್ಗೊಂಡು ಶಿಂಶುಮಾರ ಡಿಂಡಿಮಾರ ಶತಾನಂದ ಮುಂತಾದವರಿಗೆ ಬೋಧಿಸಿ ಧರ್ಮ ಸಂಸ್ಕೃತಿಯ ಸಂವರ್ಧನೆಗೆ ಮಾರ್ಗದರ್ಶನ ತೋರಿದ ದಿವ್ಯಾತ್ಮರಾಗಿದ್ದಾರೆ.
ಕಲಿಯುಗದ ಆರಂಭದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀಜಗದ್ಗುರು ರೇವಣಸಿದ್ಧರಾಗಿ ಅವತರಿಸಿ ಸಹಸ್ರಾರು ವರ್ಷಗಳ ಕಾಲ ಭೂತಲದಲ್ಲಿ ಜಾಗೃತಿಯನ್ನುಂಟು ಮಾಡಿ ಅದ್ವೈತ ಮತ ಚಕ್ರವರ್ತಿ ಎಂಬ ಖ್ಶಾತಿ ಪಡೆದಿದ್ದ ಶ್ರೀ ಶಂಕರಾಚಾರ್ಯರಿಗೆ ಚಂದ್ರಮೌಳೇಶ್ವರ ಲಿಂಗವನ್ನು ರತ್ನಗರ್ಭ ಗಣಪತಿಯನ್ನು ದಯಪಾಲಿಸಿ ನಂತರ ಕಾಂಚಿ ಕ್ಷೇತ್ರದಲ್ಲಿ ವರದರಾಜರಿಗೆ ಚಲಿಸುತ್ತಿದ್ದ ಮಸ್ತಕವನ್ನು ನಿಲ್ಲಿಸಿ ಚೋಳ ಭೂಪಾಲರನ್ನು ಆಶೀರ್ವದಿಸಿ ತಮ್ಮ ಶಿಷ್ಶರನ್ನಾಗಿಸಿದ ಶಿವ ಸ್ವರೂಪಿಯಾಗಿದ್ದಾರೆ. ಸಮಾಜದಲ್ಲಿ ಸಾಮರಸ್ಶ ಸೌಹಾರ್ದತೆ ಸಮನ್ವಯತೆ ಸಹಿಷ್ಣುತೆ ಸಂಸ್ಕೃತಿ ಸಭ್ಶತೆ ಕರ್ತವ್ಶ ಶೀಲತೆ ಭಕ್ತಿ ಜ್ಞಾನ ಉಳಿದು ಬೆಳೆದು ಬರಲು ಅರಿವನ್ನುಂಟು ಮಾಡಿ ಕಾಯಕ ದಾಸೋಹ ತತ್ವ ಸಿದ್ಧಾಂತಗಳು ನೆಮ್ಮದಿಗೆ ಮೂಲಸೆಲೆ ಎಂದು ಪ್ರತಿಪಾದಿಸಿ ಅವರು ಬೋಧಿಸಿದ ವಿಶ್ವಬಂಧುತ್ವದ ವೀರಶೈವ ದಶವಿಧ ಸೂತ್ರಗಳು ಸಕಲರಿಗೂ ದಾರಿದೀಪವಾಗಿವೆ. ಶಿವತಪಸ್ಸು ಶಿವಕರ್ಮ ಶಿವಜಪ ಶಿವಧ್ಯಾನ ಶಿವಜ್ಞಾನಗಳ ಮೂಲಕ ಮಾನವ ಮಹಾದೇವನಾಗಲು ಲಿಂಗಾಂಗ ಸಾಮರಸ್ಶದ ಮೂಲಕ ಸಾಕ್ಷಾತ್ಕಾರ ಹೊಂದಲು ಸಾಧ್ಯ ಎಂಬುದನ್ನು ಸಾರಿ ಸಾರಿ ಹೇಳಿದ ಶ್ರೀರೇಣುಕರು ಭಕ್ತರ ಪಾಲಿಗೆ ಭಗವಂತರಾಗಿದ್ದಾರೆ.
ಶ್ರೀ ಜಗದ್ಗುರು ರೇಣುಕಾಚಾರ್ಯರು ಮಾಡಿದ ಪವಾಡ ತೋರಿದ ಲೀಲೆಗಳು ಅನಂತ. ಭೂಮಂಡಲದಲ್ಲಿ ಶಿವನಾಗಿ ಸಂಚರಿಸಿ ಕೆಲವು ಕಾಲ ಗುಪ್ತವಾಗಿಯೂ ಕೆಲವು ಕಾಲ ಪ್ರಕಟವಾಗಿಯೂ ಶಿವನ ಅಣತಿಯಂತೆ ಸರ್ವಕಾರ್ಯಗಳನ್ನು ಪೂರ್ಣಗೊಳಿಸಿ ಪುನಃ ಕೊಲನುಪಾಕ ಸುಕ್ಷೇತ್ರಕ್ಕೆ ದಯಮಾಡಿಸಿ ಶ್ರೀಸೋಮೇಶ್ವರ ಮಹಾಲಿಂಗದಲ್ಲೇ ಲೀನವಾಗಿದ್ದು ಅವಿಸ್ಮರಣೀಯ. ಬಾಳೆಹೊನ್ನೂರು ಶ್ರೀರಂಭಾಪುರಿ ಮಹಾಪೀಠದ ಗುರು ಪರಂಪರೆಯ ಇತಿಹಾಸದಲ್ಲಿ ಮಹಾಮಹಿಮಶೀಲರಾದ ನೂರಿಪ್ಪತ್ತು ಜಗದ್ಗುರುಗಳು ಕೂಡಾ ಆಯಾ ಕಾಲಘಟ್ಟದಲ್ಲಿ ಶ್ರೀಪೀಠದ ಕೀರ್ತಿಯನ್ನು ಸಮೃದ್ಧಿಸಿದ್ದಾರೆ. ಪ್ರಸ್ತುತ ಪೀಠದ ಒಡೆಯರಾದ ನೂರಿಪ್ಪತ್ತೊಂದನೇ ಜಗದ್ಗುರು ಅಭಿವೃದ್ಧಿಯ ಹರಿಕಾರರಾದ ಪರಮ ಪೂಜ್ಯ ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ। ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಪೀಠಾರೋಹಣ ಹೊಂದಿ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂತೆ ಅತ್ಯಧ್ಭುತ ರಚನಾತ್ಮಕ ಸಾಧನೆಯನ್ನು ಮಾಡಿ ಶ್ರೀಪೀಠದ ಘನತೆ ಗೌರವವನ್ನು ಬಾನೆತ್ತರಕ್ಕೆ ಬೆಳೆಸಿದ ಕ್ರಿಯಾಶೀಲ ತಪಸ್ವಿಗಳಾಗಿದ್ದಾರೆ.
ಇಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆ: ಸೃಷ್ಠಿ ಸೌಂದರ್ಯದ ಮಡಿಲು ಮಲಯಾಚಲ ತಪೋಭೂಮಿ ಬಾಳೆಹೊನ್ನೂರಿನ ಶ್ರೀಜಗದ್ಗುರು ರಂಭಾಪುರಿ ವೀರಸಿಂಹಾಸನಾ ಮಹಾಸಂಸ್ಥಾನ ಪೀಠದಲ್ಲಿ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಿಂದ ನಾಡಿನಾದ್ಶಾಂತ ಶ್ರೀಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಪಾಲ್ಗುಣ ಶುದ್ಧ ತ್ರಯೋದಶಿಯ ಪವಿತ್ರ ದಿನದಂದು ಈ ವರ್ಷ ದಿನಾಂಕ – 12 – 03 – 2025ನೇ ಬುಧವಾರ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಸಂಭ್ರಮದಿಂದ ಜರುಗಲಿದೆ. ಈ ಪವಿತ್ರ ಸಂದರ್ಭದಲ್ಲಿ ಶ್ರೀಪೀಠದ ಪರಿಸರದಲ್ಲಿ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವ – ಶ್ರೀಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಹಾಗೂ ಶಿವಾದ್ವೈತ ಸಮಾವೇಶ ಜರುಗಲಿದೆ. ಜೊತೆಯಲ್ಲಿ ವಿಶೇಷ ಕೃಷಿಮೇಳ ಸಂಗೀತ ಸೌರಭ ನಗೆಹಬ್ಬ ವೀರಗಾಸೆ ಪುರಂತರ ಜಾನಪದ ಮೇಳ ಅಲ್ಲದೇ ಮೇರುಕೃತಿಗಳು ಬಿಡುಗಡೆಯಾಗಲಿವೆ. ಈ ಪವಿತ್ರ ಧರ್ಮ ಸಮಾರಂಭದಲ್ಲಿ ನಾಡಿನ ಶಿವಾಚಾರ್ಯರು ಹರ ಗುರು ಚರಮೂರ್ತಿಗಳು ರಾಜಕೀಯ ಧುರೀಣರು ಜನಪ್ರತಿನಿಧಿಗಳು ಸಾಹಿತಿಗಳು ಕವಿಕಲಾವಿದರು ಪೀಠಾಭಿಮಾನಿಗಳು ಅಸಂಖ್ಶಾತ ಭಕ್ತರು ಪಾಲ್ಗೊಳ್ಳಲಿದ್ದಾರೆ.