ಬೆಳಗಾವಿ : ಎನ್. ರವಿಕುಮಾರ್ ವಿಧಾನ ಪರಿಷತ್ ಮುಖ್ಯ ಸಚೇತಕರು, ಬೆಳಗಾವಿಗೆ ಆಗಮಿಸಿ, ಬಿಜೆಪಿಯ ಎಲ್ಲ 33+2 ನಗರ ಸೇವಕರ ಅಭಿಪ್ರಾಯಗಳನ್ನು ಪಡೆದು ಪಕ್ಷದ ಹಾಗೂ ವರಿಷ್ಠರ ತೀರ್ಮಾನದಂತೆ ಮೇಯರ್ ಚುನಾವಣೆಗೆ ಸಹಕರಿಸುವುದಾಗಿ ಎಲ್ಲ ನಗರ ಸೇವಕರು ತಿಳಿಸಿದರು, ನಂತರ ಎನ್ ರವಿ ಕುಮಾರ್ ಅವರು ಆಕಾಂಕ್ಷಿಗಳ ಹೆಸರುಗಳನ್ನು ಪಡೆದು ಭಾರತೀಯ ಜನತಾ ಪಕ್ಷದ ನಿರ್ಣಯವನ್ನು ಎಲ್ಲ ನಗರ ನಗರ ಸೇವಕರ ಅಭಿಪ್ರಾಯದಂತೆ ಹಾಗೂ ವರಿಷ್ಠರ ಅಭಿಪ್ರಾಯ ಮತ್ತು ಪಕ್ಷದ ವರಿಷ್ಠರ ಗಮನಕ್ಕೆ ತಂದು ತೀರ್ಮಾನ ತಿಳಿಸುವುದಾಗಿ ವಿನಂತಿಸಿದರು, ಮಹಾಪೌರ ಆಕಾಂಕ್ಷಿ ಅಭ್ಯರ್ಥಿಗಳು 3 ಜನ, ಉಪಮಹಾಪೌರ್ 5 ಜನ್ ಮಹಿಳೆಯರು ಆಕಾಂಕ್ಷಿಗಳ ಅಭಿಪ್ರಾಯವನ್ನು ಪಡೆದು ಎಲ್ಲ 33±2 ನಗರ ಸೇವಕರು ಪಕ್ಷದ ಹಾಗೂ ವರಿಷ್ಠರ ತೀರ್ಮಾನವನ್ನು ಒಪ್ಪಿಕೊಳ್ಳುವದಾಗಿ ತಿಳಿಸಿದರು.
ಅಧ್ಯಕ್ಷೆ ಗೀತಾ ಸುತಾರ್ , ಶಾಸಕ ಅಭಯ್ ಪಾಟೀಲ ಮಾಜಿ ಶಾಸಕ
ಅನಿಲ್ ಬೆನಕೆ ಹಾಗೂ ಮಹಾಪೌರ ಸವಿತಾ ಕಾಂಬಳೆ ಉಪಮಾಪೌರ ಆನಂದ್ ಚೌಹಾಣ್ ಸಭೆಯಲ್ಲಿ ಉಪಸ್ಥಿತರಿದ್ದರು