ಬೆಳಗಾವಿ : ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ, ಬೆಳಗಾವಿಯು ಮಾರ್ಚ್ 7 ರಿಂದ 9 ರವರೆಗೆ 15ನೇ ಎಮ್.ಕೆ. ನಂಬಿಯಾರ್ ಸ್ಮಾರಕ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ( ಮೂಟ್ ಕೋರ್ಟ್) ಸ್ಪರ್ಧೆಯನ್ನು ಆಯೋಜಿಸಿತ್ತು .
ಸಮಾರೋಪ ಸಮಾರಂಭಕ್ಕೆ ನ್ಯಾಯಮೂರ್ತಿ ಜಿ. ಬಸವರಾಜ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಕಾನೂನು ಶಿಕ್ಷಣದಲ್ಲಿ ಮೂಟ್ ಕೋರ್ಟ್ ಬಹಳ ಅವಶ್ಯಕವಾಗಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರಕರಣಗಳ ಕುರಿತು ಆಲೋಚನೆ, ವಿಶ್ಲೇಷಣೆ, ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ ಮತ್ತು ವೃತ್ತಿಪರ ವಕೀಲರಂತೆ ವಾದಿಸಲು ಅವಕಾಶ ಒದಗಿಸುತ್ತದೆ ಎಂದು ಅವರು ಹೇಳಿದರು.
ಕೆ ಎಲ್ ಎಸ್ ಜಿ.ಐ.ಟಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಜೇಂದ್ರ ಬೆಳಗಾಂವ್ಕರ್ ಮಾತನಾಡಿ, ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಮಹತ್ವವನ್ನು ವಿವರಿಸಿದರು.
ಸಿಂಬಯೋಸಿಸ್ ಕಾನೂನು ಮಹಾವಿದ್ಯಾಲಯ, ನೋಯ್ಡಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರೂ .50,000 ನಗದು ಹಾಗೂ ಟ್ರೋಫಿ ಗೆದ್ದಿತು. ತಮಿಳುನಾಡಿನ ಸೇಲಂನ ಸೆಂಟ್ರಲ್ ಕಾನೂನು ಮಹಾವಿದ್ಯಾಲಯ ದ್ವಿತೀಯ ಸ್ಥಾನ ಪಡೆದು ರೂ. 30,000 ನಗದು ಹಾಗೂ ಟ್ರೋಫಿ ಪಡೆದರು.
ಸರ್ವ ಶ್ರೇಷ್ಟ ಪುರುಷ ವಾದಿ ಪ್ರಶಸ್ತಿ ಬೆಂಗಳೂರಿನ ಕೆಎಲ್ಇ ಕಾನೂನು ಮಹಾವಿದ್ಯಾಲಯದ ಅನ್ಮೋಲ್ ಶ್ರಾಫ್ ಅವರಿಗೆ ಲಭಿಸಿದ್ದು, ಅವರು ರೂ. 15,000 ನಗದು ಹಾಗೂ ಟ್ರೋಫಿ ಪಡೆದರು.
ಸರ್ವ ಶ್ರೇಷ್ಠ ಪುರುಷ ವಾದಿ, ಮಹಿಳಾ ವಾದಿ ಪ್ರಶಸ್ತಿ ತಮಿಳುನಾಡಿನ ಸೇಲಂನ ಸೆಂಟ್ರಲ್ ಕಾನೂನು ಮಹಾವಿದ್ಯಾಲಯದ ಗೋಪಿಕಾ ಪಿ.ಆರ್. ಅವರಿಗೆ ದೊರಕಿದ್ದು, ರೂ. 15,000 ನಗದು ಹಾಗೂ ಟ್ರೋಫಿ ಗೆದ್ದರು.
ಎ ಎನ್ ಪೋದ್ದಾರ ಅತ್ಯುತ್ತಮ ವಾದಿ ಪ್ರಶಸ್ತಿಯ ಮೊತ್ತ ರೂ. 6,050 ನಗದು ಅನ್ನು ಅನ್ಮೋಲ್ ಶ್ರಾಫ್ ಹಾಗೂ ಗೋಪಿಕಾ ಪಿ.ಆರ್. ಇಬ್ಬರೂ ಹಂಚಿಕೊಂಡರು.
ಅತ್ಯುತ್ತಮ ಸಂಶೋಧಕ ಪ್ರಶಸ್ತಿ ತಮಿಳುನಾಡಿನ ಶಾಸ್ತ್ರ ಡೀಮ್ಡ್ ಯುನಿವರ್ಸಿಟಿಯ ಮೀರಾ ಶ್ರೀಕಾಂತ್ ಅವರಿಗೆ ನೀಡಲಾಯಿತು. ಅವರು ರೂ. 10,000 ನಗದು ಹಾಗೂ ಟ್ರೋಫಿ ಪಡೆದರು.
ಪ್ರಾಧ್ಯಾಪಕ ಡಾ. ಪ್ರಸನ್ನಕುಮಾರ್ , ಸ್ವಾಗತಿಸಿದರು. ಮೂಟ್ ಕೋರ್ಟ್ ವಿಭಾಗದ ಅಧ್ಯಕ್ಷೆ ಪ್ರೊ. ಅಶ್ವಿನಿ ಪರಬ್ ಪ್ರಶಸ್ತಿಗಳನ್ನು ಘೋಷಿಸಿದರು. ಕಾರ್ಯಕ್ರಮದ ಕಾರ್ಯದರ್ಶಿ ಮೃಣಾಲ್ ಕಾಮತ್ ವಂದಿಸಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಚ್.ಎಚ್. ಹವಾಲ್ದಾರ್, ಆಡಳಿತ ಮಂಡಳಿ ಸದಸ್ಯರು, ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.