ಬೆಳಗಾವಿ : ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ
ಸನಿಹ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.
ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ್ದ ಬಸ್ ಏಣಗಿ ಗ್ರಾಮದಿಂದ ಬೈಲಹೊಂಗಲ ಕಡೆ ಹೊರಟ ಬಸ್ ಲಿಂಗದಳ್ಳಿ ಮಾರ್ಗವಾಗಿ ಹೋಗುವಾಗ ಅರವಳ್ಳಿ ಸನಿಹ ಉರುಳಿ ಬಿದ್ದಿದೆ. ಕೆಲ ಪ್ರಯಾಣಿಕರಿಗೆ ಗಾಯಗಳಾಗಿದ್ದು ಬಸ್ಸಿನ ಕಿಟಕಿ ಮೂಲಕ ಹೊರ ಬರುತ್ತಿರುವ ದೃಶ್ಯ ವಿಡಿಯೋ ಮೂಲಕ ವೈರಲ್ ಅಗಿದೆ.