ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರವಿ ಬೆಳಗೆರೆ ದತ್ತಿನಿಧಿ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಡಿಜಿಟಲ್ ಮೀಡಿಯಾ ಪ್ರಧಾನ ಸಂಪಾದಕ ಎಂ.ಕೆ. ಹೆಗಡೆಗೆ ಪ್ರದಾನ ಮಾಡಲಾಯಿತು.
ಕೊಪ್ಪಳದಲ್ಲಿ ಭಾನುವಾರ ಸಂಜೆ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಕಳೆದ 30 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಎಂ.ಕೆ.ಹೆಗಡೆ, ವಿಜಯ ಕರ್ನಾಟಕ, ವಿಜಯವಾಣಿ, ಕನ್ನಡ ಪ್ರಭ, ಕನ್ನಡ ಜನಾಂತರಂಗ, ಲೋಕಧ್ವನಿ ಮೊದಲಾದ ಪತ್ರಿಕೆಗಳಲ್ಲಿ, ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ.
ಸಧ್ಯ ಪ್ರಗತಿ ವಾಹಿನಿ ಡಿಜಿಟಲ್ ಮೀಡಿಯಾ ನಡೆಸುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಮಾಧ್ಯಮ ಸಲಹೆಗಾರರಾಗಿ ಸಹ ಕೆಲಸ ಮಾಡುತ್ತಿದ್ದಾರೆ.