ಬೆಳಗಾವಿ : ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಮರಿಯಮ್ಮನ ಗುಡಿ ಓಣಿಯ ಬಳಿ ನವಜಾತ ಹೆಣ್ಣು ಹಸುಗೂಸು ಪತ್ತೆಯಾಗಿದೆ. ಅಂಬಡಗಟ್ಟಿ ಗ್ರಾಮದ ಮೇಟಿ ಅವರ ಮನೆಯ ಹಿತ್ತಲಲ್ಲಿ ಪತ್ತೆಯಾದ ಈ ಹಸುಗೂಸು, ನಾಯಿ ಹಾಗೂ ಹಂದಿ ದಾಳಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಿತ್ತೂರು ಸಿಪಿಐ ಶಿವಾನಂದ ಗುಡಗನಟ್ಟಿ ಹಾಗೂ ಪಿಎಸ್ಐ ಪ್ರವೀಣ ಕೋಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಹೃದಯವಿದ್ರಾವಕ ಘಟನೆಯು ಗ್ರಾಮದಲ್ಲಿ ತೀವ್ರ ಆತಂಕ ಮೂಡಿಸಿದ್ದು, ಶಿಶುವನ್ನು ಯಾರಾದರೂ ತ್ಯಜಿಸಿದ್ದಾರಾ ಅಥವಾ ಇದು ಯಾವುದೇ ಅಪರಾಧ ಚಟುವಟಿಕೆಯ ಭಾಗವೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.