ಧಾರವಾಡ : ದಿನಾಂಕ 4.3.2025 ರಂದು ಕರ್ನಾಟಕ ಸರ್ಕಾರದ ಬಾಲ ವಿಕಾಸ ಅಕಾಡೆಮಿ ರಾಜ್ಯ ಕಚೇರಿ ಧಾರವಾಡದಲ್ಲಿ ನೂತನವಾಗಿ ನಿರ್ದೇಶಕರಾಗಿ ಕಚೇರಿಗೆ ಹಾಜರಾಗಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ಸಮಕ್ಷಮದಲ್ಲಿ ಅಧಿಕಾರ ಪದಗ್ರಹಣ ಮಾಡಲಾಯಿತು ಅಧಿಕೃತವಾಗಿ ಕಾರ್ಯಕಲಾಪಗಳನ್ನು ನಡೆಸಲಾಯಿತು.
M Y ಜರಾಳೆ, ಶ್ರೀನಿವಾಸ್ ಸೊರಟೂರ, ಶ್ರೀಮತಿ ಚೆನ್ನಕ್ಕ ಬಿರಾದಾರ ಅವರ ಪದಗ್ರಹಣ ಮಾಡಿದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಡಿಯಲ್ಲಿ
0 – 18 ವಯೋಮಾನದ ಮಕ್ಕಳ ಕಲ್ಯಾಣ , ಶ್ರೇಯೋಭಿವೃದ್ಧಿ ಗಳ ಬಗ್ಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಇಲಾಖೆ ಮತ್ತು ವಿವಿಧ ಖಾಸಗಿ ಸಂಘ ಸಂಸ್ಥೆಗಳಲ್ಲಿ ಮಕ್ಕಳ ಹಕ್ಕು, ಸೌಲಭ್ಯಗಳು, ಆರೋಗ್ಯ, ದೌರ್ಜನ್ಯ ಪ್ರಕರಣಗಳು, ಉತ್ತಮ ನಾಗರಿಕರಾಗಲು ಪ್ರೋತ್ಸಾಹಕ ವಿವಿಧ ಯೋಜನೆಗಳು ಅನುಷ್ಠಾನ ಅನುಷ್ಠಾನ ಸಂಬಂಧಿತ ವಿವಿಧ ಸಮಸ್ಯೆಗಳು ಮುಂತಾದ ಕಾರ್ಯಕ್ರಮಗಳನ್ನು ಹಾಗೂ ಘಟನೆಗಳನ್ನು ಮತ್ತು ಸಂಬಂಧಿಸಿದ ಕಚೇರಿಗಳನ್ನು ಭೇಟಿ ಮಾಡಿ ಅಧಿಕಾರಿಗಳ ಸಭೆ ಮಾಡಿ ವಿವಿಧ ಇಲಾಖೆಗಳ ಪೂರಕ ಯೋಜನೆಗಳನ್ನು ಪರಿಶೀಲಿಸುವ ಬಗ್ಗೆ ಮಾನ್ಯ ಅಧ್ಯಕ್ಷರು ಮಾಹಿತಿಯನ್ನು ನೀಡಿದರು.
ಕಳೆದ ಸಾಲಿನ ಬಾಕಿ ಉಳಿದಿರುವ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಹಾಗೂ ಹಾಗೂ ವಿವಿಧ ಅನುದಾನಗಳನ್ನು ಬಿಡುಗಡೆ ಖರ್ಚು ವೆಚ್ಚ ಭರಿಸವ ಬಗ್ಗೆ ಪರಿಶೀಲನೆ ಕುರಿತು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪರಿಶೀಲಿನ ಸಭೆಯನ್ನು ಕೈಗೊಳ್ಳಲಾಯಿತು..
ಕಾರ್ಯದರ್ಶಿ ಮತ್ತು ಯೋಜನಾಧಿಕಾರಿ ಭಾರತಿ ಶೆಟ್ಟರ್ ಹಾಗೂ ವಿವಿಧ ಮಟ್ಟದ ಅಧಿಕಾರಿಗಳು, ಕಚೇರಿ ಸಿಬ್ಬಂದಿಯವರು ಹಾಜರಿದ್ದು ಅಗತ್ಯ ಮಾಹಿತಿಯನ್ನು ಸಭೆಗೆ ಪೂರೈಸಿದರು. ನೂತನವಾಗಿ ಪದಗ್ರಹಣ ಸಮಾರಂಭದಲ್ಲಿ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ವಿವಿಧ ಸಂಘಟನೆಗಳ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ವಿವಿಧ ಪದಾಧಿಕಾರಿಗಳು ಹಾಜರಿದ್ದು ನನಗೆ ವೈಯಕ್ತಿಕವಾಗಿ ಮತ್ತು ಅಕಾಡೆಮಿ ಅಧ್ಯಕ್ಷರಿಗೆ ಅಭಿನಂದಿಸಿ, ಶುಭಾಶಯಗಳನ್ನು ಕೋರಿದರು.
YH ಬಣವಿ , ರಾಜಶೇಖರ ಹೊನ್ನಪ್ಪನವರ, ಗುರು ತಿಗಡಿ , ನಾರಾಯಣ ಭಜಂತ್ರಿ, ಬಶೆಟ್ಟಿ ಸರ್, ಕದಂ ರವರು ಹಾಗೂ ಸಂಘಟನೆಯ ಹಲವು ಸ್ನೇಹಿತರ ಬಳಗ ಹಾಜರಿದ್ದು ಶುಭ ಕೋರಿದರು .ಇದು ಅತ್ಯಂತ ಸಂತಸದ ಸಂಗತಿಯಾಗಿತ್ತು.
ವಿಶೇಷವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ RR ಸದಲಗಿ , ಖಾಜಿ ಡಯಟ್,eco ಛಬ್ಬಿ, ಕಲಾವಿದ ಶಿಕ್ಷಕ ಕಣವಿ, ಹಾಗೂ ಬೀ ಈ ಓ ಮಂಜುನಾಥ ಕಲಾದಗಿ,Ghs HM ಶ್ರೀಮತಿ ಕಳಸಣ್ಣವರ, ಶ್ರೀಮತಿ ತಡಸದ , sk ಮಾಕಣ್ಣವರ ರವರೆಲ್ಲರೂ ಹಿರಿಕಿರಿಯ ಅಧಿಕಾರಿಗಳೊಂದಿಗೆ ಬಾಲವಿಕಾಸ ಅಕಾಡಮಿಗೆ ಆಗಮಿಸಿ ನನ್ನನ್ನು ಸತ್ಕರಿಸಿ ಶುಭ ಹಾರೈಸಿದ್ದಾರೆ ..
ರಾಜ್ಯಬಾಲ ವಿಕಾಸ ಅಕಾಡೆಮಿ ಸದಸ್ಯರನ್ನಾಗಿ ನೇಮಿಸಿದ ಕರ್ನಾಟಕ ಸರ್ಕಾರಕ್ಕೂ ಅಧ್ಯಕ್ಷ ಸಂಗಮೇಶ ಬಿರಾದಾರ್ ರವರಿಗೂ ಧನ್ಯವಾದಗಳು.
ಸಮಾರಂಭದಲ್ಲಿ ಹಾಜರಿದ್ದು ಶುಭ ಹಾರೈಕೆಯನ್ನು ಹಾರೈಸಿದ ಮತ್ತು ಅಭಿನಂದಿಸಿದ ನನ್ನೆಲ್ಲ ಶಿಕ್ಷಣ ಇಲಾಖೆಯ ಸ್ನೇಹಿತ ಬಳಗಕ್ಕೂ, ಸಂಘಟನೆಗಳ ಪದಾಧಿಕಾರಿ ಮಿತ್ರರಿಗೂ ಹೃದಯಪೂರ್ವಕ ಧನ್ಯವಾದಗಳು
ಗಜಾನನ ಮನ್ನಿಕೇರಿ ವಿಶ್ರಾಂತ ಜಂಟಿ ನಿರ್ದೇಶಕರು ಧಾರವಾಡ