ಮೂಡಲಗಿ: ಡವಳೇಶ್ವರ ಗ್ರಾಮವು ಘಟಪ್ರಭಾ ನದಿ ತಟದಲ್ಲಿ ಆಗಾಗ ಪ್ರವಾಹದ ಸಂಕಷ್ಟಕ್ಕೆ ತುತ್ತಾಗುತ್ತಿತ್ತು ಕಳೆದ ಹಲವು ವರ್ಷಗಳಿಂದ ಆ ಗ್ರಾಮವನ್ನು ಎತ್ತರದ ಪ್ರದೇಶಕ್ಕೆ ಪುನರ್ ನಿರ್ಮಾಣ ಮಾಡಲಾಗಿದ್ದು, ಅಲ್ಲಿ ದೇವಸ್ಥಾನಗಳು, ಮಠ ಮಂದಿರಗಳು, ಶಾಲೆಗಳು, ಇನ್ನಿತರ ಎಲ್ಲ ಮೂಲಭೂತ ಸೌಲಭ್ಯಗಳು ತ್ವರಿತ ಗತಿಯಲ್ಲಿ ನಿರ್ಮಾಣವಾಗುತ್ತಿವೆ. ಅದರ ಮುಂದುವರಿದ ಭಾಗವಾಗಿ ಗ್ರಾಮದ ಜನರ ಉಪಯೋಗಕ್ಕಾಗಿ ಸಮುದಾಯ ಭವನದ ಅವಶ್ಯಕತೆಯನ್ನು ಮನಗಂಡು ಈ ಸಮುದಾಯ ಭವನ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಢವಳೇಶ್ವರ ಗ್ರಾಮದ ಶ್ರೀ ವೀರಾನಂದ ಮಠದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಡವಳೇಶ್ವರ ಗ್ರಾಮ ಎಲ್ಲಾ ರೈತಾಪಿ ಕುಟುಂಬದವರು ವಾಸವಾಗಿರುವ ಗ್ರಾಮವಾಗಿದ್ದು, ಘಟಪ್ರಭಾ ನದಿ ತಟದಲ್ಲಿ ಇರುವುದರಿಂದ ಕೃಷಿ ಅತ್ಯಂತ ಉತ್ಕೃಷ್ಠವಾಗಿದೆ. ಗ್ರಾಮದ ಜನರು ಹೆಚ್ಚು ಶ್ರಮ ವಹಿಸಿ ಕೃಷಿಯನ್ನು ಉಳಿಸಿ ಬೆಳಸಿಕೊಂಡು ಬಂದಿದ್ದಾರೆ. ಅದರ ಜೊತೆಗೆ ಈ ರೀತಿಯಾದಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ತೊಡಗಿದ್ದಾರೆ. ಅದಕ್ಕೆ ಪೂರಕವಾಗಿ ಸಮುದಾಯ ಭವನ ನಿರ್ಮಾಣ ಮಾಡುವುದರಿಂದ ಗ್ರಾಮಗಳಲ್ಲಿ ನಡೆಯುವ ಹಬ್ಬ ಹರಿದಿನಗಳಿಗೆ ನೆರವಾಗುವುದರ ಜೊತೆಗೆ ಬಡ ಜನರು ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಉಪಯೋಗಿಸಕೊಳ್ಳಬಹುದು ಎಂದು ತಿಳಿಸಿದರು.
ನನ್ನ ರಾಜ್ಯಸಭಾ ಸದಸ್ಯರ ಅಧಿಕಾರಾವಧಿಯಲ್ಲಿ ಅರಭಾವಿ ಮತಕ್ಷೇತ್ರದ ನಾನಾ ದೇವಸ್ಥಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದೇನೆ. ಆಯಾ ಸಮುದಾಯಗಳ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಕ್ಷೇತ್ರದಲ್ಲಿ ನಾನಾ ವರ್ಗಗಳ ಕಲ್ಯಾಣಕ್ಕಾಗಿ ಅನುದಾನ ಬಳಕೆ ಮಾಡಲಾಗಿದ್ದು, ಹೆಚ್ಚಿನ ಅನುದಾನ ಒದಗಿಸುವ ಮೂಲಕ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಿದ ತೃಪ್ತಿ ತಮಗಿದೆ ಎಂದರು.
ಇದೇ ಸಂದರ್ಭದಲ್ಲಿ ಅವರಾಧಿ ಗ್ರಾಮದ ಶ್ರೀ ಗವಿಸಿದ್ದೇಶ್ವರ ಮಠದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದರು.
ಸಂಜು ಚನ್ನಾಳ, ಆನಂದ ಚನ್ನಾಳ, ಅಜೀತ ಅಂಗಡಿ, ವೆಂಕಪ್ಪ ಅಂಬಲಜೇರಿ, ಭೀಮಪ್ಪ ಕಾಂಬಳೆ, ರಂಗಪ್ಪ ಬಾಗೋಡಿ, ಅಜೀತ ಕಟಗೇರಿ, ಲ್ಯಾಣಿ ಪಾಟೀಲ, ಗೋವಿಂದ ಚನ್ನಾಳ, ಮಹಾಂತೇಶ ಹಿರೇಮಠ, ರಂಗಪ್ಪ ಉಪ್ಪಾರ ಅವರಾಧಿ ಗ್ರಾಮದ ರಮೇಶ ಉಟಗಿ, ಶ್ರೀಶೈಲ ಪೂಜೇರಿ, ನಿಂಗಪ್ಪ ಪಾಟೀಲ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ದಳವಾಯಿ, ಸಿದ್ದಯ್ಯ ಮಠಪತಿ, ಬಸವರಾಜ ಹಿಡಕಲ್, ಗಂಗಾಧರ ಹಿರೇಮಠ, ಮಾರುತಿ ಪೂಜೇರಿ, ಲಕ್ಷ್ಮಣ ದಳವಾಯಿ ಸೇರಿದಂತೆ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.