ಬೆಳಗಾವಿ: ನೆಹರು ನಗರದ ಸುತಾರಿಯಾ
ಅಟೊಮೊಬೈಲ್ಸ್ನ ಆವರಣದಲ್ಲಿ ನಿಲ್ಲಿಸಿದ್ದ ಬುಲೆರೊ ಪಿಕಪ್ ವಾಹನದ ಸ್ಪೇರ್ವೀಲ್ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಸಯ್ಯದ್ಹುಸೇನ್ ಸಯ್ಯದ್ನೂರ (24) ಬಂಧಿತ. ಆತನಿಂದ ರೂ.60 ಸಾವಿರ ಮೌಲ್ಯದ 5 ಸ್ಪೇರ್ ವೀಲ್ಗಳು, ಕೃತ್ಯಕ್ಕೆ ಬಳಸಿದ ರೂ. 9.50 ಲಕ್ಷ ಮೌಲ್ಯದ ವಾಹನ ಸೇರಿದಂತೆ ರೂ.10.10 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಮತ್ತೊಬ್ಬ ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.