ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ಅವರು ಸೋಲನುಭವಿಸಿದ್ದಾರೆ.
ಎಎಪಿ ಮುಖ್ಯಸ್ಥ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಪ್ರವರ್ಧಮಾನಕ್ಕೆ ಏರಿದ ಅರವಿಂದ ಕೇಜ್ರಿವಾಲ್ ಅವರು ಮಾಜಿ ಮುಖ್ಯಮಂತ್ರಿಯ ಸಾಹಿಬ್ ಸಿಂಗ್ ವರ್ಮಾ ಪುತ್ರ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ 3,182 ಮತಗಳಿಂದ ಸೋಲನುಭವಿಸಿದರು.
ಭ್ರಷ್ಟಾಚಾರ ಆರೋಪ ಮತ್ತು ‘ಶೀಶ್ ಮಹಲ್’ ವಿವಾದದ ವಿರುದ್ಧ ಹೋರಾಡುತ್ತಿದ್ದ ಕೇಜ್ರಿವಾಲ್, 2013 ರಲ್ಲಿ ಆಗಿನ ದೆಹಲಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರನ್ನು ಸೋಲಿಸಿದ ನಂತರ ಮೊದಲ ಬಾರಿಗೆ ನವದೆಹಲಿ ಸ್ಥಾನವನ್ನು ಗೆದ್ದರು. ಅವರು 2015 ಮತ್ತು 2020 ರ ಚುನಾವಣೆಯಲ್ಲಿ ಭಾರಿ ಅಂತರಗಳೊಂದಿಗೆ ಈ ಸ್ಥಾನವನ್ನು ಅವರು ಉಳಿಸಿಕೊಂಡಿದ್ದರು. ಆದರೆ ಈ ಬಾರಿ ಅವರಿಂದ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆಮ್ ಆದ್ಮಿ ಪಕ್ಷದ ಎರಡನೇ ವರಿಷ್ಠ ನಾಯಕ ಮನೀಶ ಸಿಸೊಡಿಯಾ ಅವರು ಸಹ ಸೋಲೊಪ್ಪಿಕೊಂಡಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಂಗ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ತರ್ವಿಂದರ್ ಸಿಂಗ್ ಮರ್ವಾಹ್ ಅವರ ವಿರುದ್ಧ ಸೋಲನ್ನು ಒಪ್ಪಿಕೊಂಡಿದ್ದಾರೆ. ಸಿಸೋಡಿಯಾ ಅವರು ಪೂರ್ವ ದೆಹಲಿಯ ಪಟ್ಪರ್ಗಂಜ್ನಿಂದ ಸತತ ಮೂರು ಬಾರಿ ಗೆದ್ದ ನಂತರ ಈ ಚುನಾವಣೆಯಲ್ಲಿ ಜಂಗ್ಪುರದಿಂದ ಸ್ಪರ್ಧಿಸಿದ್ದರು.
ಈ ಬಾರಿ ಜಂಗ್ಪುರದಲ್ಲಿ ಗೆಲ್ಲಲು ಹೊರಟಿರುವ ಬಿಜೆಪಿಯ ತರ್ವಿಂದರ್ ಸಿಂಗ್ ಮರ್ವಾಹ್ ಅವರು ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ಹೇಳಿದರು. ಸೋಲಿನ ಹಿಂದೆ ಏನಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಫಲಿತಾಂಶವನ್ನು ವಿಶ್ಲೇಷಿಸಿ ತೀರ್ಮಾನಕ್ಕೆ ಬರುತ್ತೇನೆ. ಪಕ್ಷದ ಕಾರ್ಯಕರ್ತರ ಜೊತೆ ಸೇರಿ ನಾವೆಲ್ಲರೂ ಶ್ರಮಿಸಿದ್ದೇವೆ, ಆದರೆ, ನಾನು 600 ಮತಗಳಿಂದ ಸೋತಿದ್ದೇನೆ, ಗೆದ್ದ ಅಭ್ಯರ್ಥಿಯನ್ನು ನಾನು ಅಭಿನಂದಿಸುತ್ತೇನೆ, ಅವರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ 989 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.