ಮುಂಬೈ: ಸೈಬರ್ ಭದ್ರತೆಗಾಗಿ ಭಾರತೀಯ ಬ್ಯಾಂಕ್ಗಳಿಗೆ ‘bank.in’ ಎನ್ನುವ ಪ್ರತ್ಯೇಕ ಜಾಲತಾಣ ತೆರೆಯಲು ಆರ್ಬಿಐ ಶುಕ್ರವಾರ ನಿರ್ಧರಿಸಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ‘fin.in’ ಡೊಮೇನ್ ಇರಲಿದೆ.
ಈ ಹಣಕಾಸು ವರ್ಷದ ದ್ವೈಮಾಸಿಕ ಹಣಕಾಸು ನೀತಿಗಳ ಬಗ್ಗೆ ಮಾತನಾಡಿದ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಇದನ್ನು ಪ್ರಸ್ತಾಪಿಸಿದ್ದಾರೆ. ‘bank.in’ ಜಾಲತಾಣದಲ್ಲಿ ನೋಂದಣಿ 2025ರ ಏಪ್ರಿಲ್ನಿಂದ ಆರಂಭವಾಗಲಿದೆ. ಭವಿಷ್ಯದಲ್ಲಿ ‘fin.in’ ಜಾಲತಾಣವನ್ನೂ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ನಿರ್ಧಾರವು ಹಣಕಾಸು ಕ್ಷೇತ್ರದಲ್ಲಿ ನಂಬಿಕೆ ಹೆಚ್ಚಿಸುವ ಗುರಿ ಹೊಂದಿದೆ. ಡಿಜಿಟಲ್ ಪಾವತಿಗಳಲ್ಲಿ ಹೆಚ್ಚುತ್ತಿರುವ ವಂಚನೆ ಪ್ರಮಾಣ ಕಳವಳಕಾರಿಯಾಗಿದೆ. ಇದನ್ನು ತೊಡೆದು ಹಾಕಲು ಭಾರತೀಯ ಬ್ಯಾಂಕ್ಗಳಿಗೆ ‘bank.in’ ಎನ್ನುವ ಪ್ರತ್ಯೇಕ ಡೊಮೇನ್ ತೆರೆಯಲು ಆರ್ಬಿಐ ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ.

ಈ ಕ್ರಮವು ಸೈಬರ್ ಬೆದರಿಕೆಗಳು, ವಂಚನೆಯಂತಹ ದುರುದ್ದೇಶಪೂರಿತ ಚಟುವಟಿಕೆಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಹಣಕಾಸು ಸೇವೆಗಳನ್ನು ಸುರಕ್ಷಿತಗೊಳಿಸುತ್ತದೆ. ಇದರಿಂದಾಗಿ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿ ಸೇವೆಗಳಲ್ಲಿ ಜನರ ನಂಬಿಕೆ ಹೆಚ್ಚಿಸುತ್ತದೆ. ಇದಕ್ಕೆ ಇನ್ಸ್ಟಿಟ್ಯೂಟ್ ಫಾರ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ (IDRBT) ವಿಶೇಷ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.