23 ವರ್ಷಗಳ ಹಿಂದೆ ಸತ್ತವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ರೂ ಆಸ್ತಿ ಲಪಟಾಯಿಸಿದ್ದವರ ಬಂಧನ..!
DUBLICATE ಮಾಡಿ ನೂರಾರು ಎಕರೆ ಹೊಡೆದಿದ್ದ ಕಡೋಲಿಯ ಲಪಂಗ್ HMT ಸಿಕ್ಕಿಬಿದ್ದಿದ್ಹೇಗೆ..?
ಬೆಳಗಾವಿ ಪೊಲೀಸರ ಬಲೆಗೆ ಬಿದ್ದ ನಾಲ್ವರು ಬೋಗಸ್ ಬದ್ಮಾಸಗಳು..!
ಬೆಳಗಾವಿ :ಇಲ್ಲಿ ಬೆವಾರಸಾ (ವಾರಸುದಾರರು ಇಲ್ಲದಿರುವವರು) ಅಮಾಯಕರು ಹಾಗೂ ಅನಕ್ಷರಸ್ಥ ಜನರ ನೂರಾರು ಎಕರೆ ಜಮೀನು ಹಾಗೂ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸುತ್ತಿದ್ದ ಕಡೋಲಿ ಗ್ರಾಮದ HMT ಹೆಸರಿನಿಂದಲೇ ಚಿರಪರಿಚಿತನಾಗಿದ್ದ ಹಾರೂಣ ರಶೀದ ಅಬ್ದುಲಮಜೀದ ತಹಶೀಲ್ದಾರ ಮತ್ತು ಅವನ ಗ್ಯಾಂಗನ್ನು ಬೆಳಗಾವಿ ಪೊಲೀಸರು ಹಿಂಡಲಗಾ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಮಾಡಿದ್ದೇನು, ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ..?
ಬೆಳಗಾವಿ ತಾಲೂಕಿನ ಗಡಿ ಭಾಗದಲ್ಲಿರುವ ಬಾಚಿ ಗ್ರಾಮದ ರಿ.ಸ.ನಂ: 59, 60, 62/1 ಒಟ್ಟು 8 ಏಕರೆ. 21 ಗುಂಟೆ ಜಾಗವನ್ನು ಈ 23 ವರ್ಷಗಳ ಹಿಂದೆ ಮೃತರಾಗಿದ್ದ ಮಹಿಳೆಯ ಜಾಗದಲ್ಲಿ ನಕಲಿಯೊರ್ವ ಮಹಿಳೆಯನ್ನು ತೋರಿಸಿ ಜಮೀನನ್ನು ಲಪಟಾಯಿಸಿ ಸಿಕ್ಕಿ ಬಿದ್ದಿದ್ದಾರೆ ಈ ಖದಿಮರು.
ಕೊನೆಗೂ ಸಿಕ್ಕಿಬಿದ್ದ ನಾಲ್ಕು ಜನ ಲಪಂಗರು.
1) ಸಾಗರ ದತ್ತಾತ್ರಯ ಜಾದವ ಸಾ: ಕಂಗ್ರಾಳಿ ಬಿ ಕೆ
2) ಸುರೇಶ ಯಲ್ಲಪ್ಪಾ ಬೆಳಗಾವಿ ಸಾ: ಮುತ್ಯಾನಟ್ಟಿ
3) ಶಾಂತಾ ಮೋಹನ ನಾರ್ವೇಕರ ಸಾ: ಸಾಹುಕಾರ ಗಲ್ಲಿ ಕಡೋಲಿ
4) ಹಾರೂಣ ರಶೀದ ಅಬ್ದುಲಮಜೀದ ತಹಶೀಲ್ದಾರ (HMT) ಸಾ: ಕಲ್ಮೇಶ್ವರ ಗಲ್ಲಿ ಕಡೋಲಿ ನಾಲ್ಕು ಜನ ಸದಾ
ಬೆವಾರಸಾ (ವಾರಸುದಾರರು ಇಲ್ಲದಿರುವವರು) ಅಮಾಯಕರು ಹಾಗೂ ಅನಕ್ಷರಸ್ಥ ಜನರ ಜಮೀನುಗಳನ್ನು ಹುಡುಕಾಟ ನಡೆಸುವುದೇ ಇವರ ಕಚಡಾ ಕೆಲಸ. ಇದರಲ್ಲಿ ಕಡೋಲಿ ಗ್ರಾಮದ ಹಾರೂಣ ರಶೀದ ಅಬ್ದುಲಮಜೀದ ತಹಶೀಲ್ದಾರ (HMT) ಈತನೇ ಇಂತಹ ಕೃತ್ಯಗಳಿಗೆ ಕಿಂಗ್ಪಿನ್ ಆಗಿದ್ದ ಈಗ ಕೊನೆಗೂ ಸಹಚರರೊಂದಿಗೆ ಸಿಕ್ಕಿಬಿದ್ದಿದ್ದಾನೆ.
ಲಪಂಗರು ಸಿಕ್ಕಿ ಬಿದ್ದಿದ್ದು ಹೇಗೆ..?
ದಿನಾಂಕ: 20/04/2024 ರಂದು ಮುಂಬೈನಿಂದ ಬಂದ ವಿನಿತಾ ವಿಜಯ ಅಸಗಾಂವಕರ ಎಂಬುವರು
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ತನ್ನ ಮೃತ ಅತ್ತೆ ಕಮಲಾಬಾಯಿ ಯಶವಂತೆ ಪ್ರಭು ಅಸಗಾಂವಕರ ಇವರಿಗೆ ಒಟ್ಟು 12 ಮಕ್ಕಳಿದ್ದು ಅದರಲ್ಲಿ ಇವರ ಗಂಡ ವಿಜಯ ಎಂಬಾತ 27/07/2003 ರಂದು ಮೃತನಾಗಿರುತ್ತಾನೆ. ಇದಕ್ಕಿಂತ ಮುಂಚೆ ನಮ್ಮ ಅತ್ತೆಯಾದ ಮೃತ ಕಮಲಾಬಾಯಿ ರವರು ದಿನಾಂಕ: 22/07/2001 ರಂದು ಮೃತರಾಗಿರುತ್ತಾರೆ. ತಾಯಿ ಸಾಯುವ ಮುನ್ನ ಮಗ ವಿಜಯ ಅಸಗಾಂವಕರ ಇವರಿಗೆ ತಾಯಿ ಮೃತ್ಯುಪತ್ರ (ವಿಲ್) ಬರೆಸಿದ್ದು, ವಿಲ್ನಲ್ಲಿ ಬೆಳಗಾವಿ ಬಾಚಿ ಗ್ರಾಮದ ರಿ.ಸ.ನಂ: 59, 60, 62/1 ಒಟ್ಟು 8 ಏಕರೆ. 21 ಗುಂಟೆ ಜಾಗೆ ತನ್ನ ಮಗನಿಗೆ ಸೇರಬೇಕು ಅಂತಾ ಇದ್ದು, ಕಾರಣಾಂತರದಿಂದ ಅದು ಪಿರ್ಯಾದಿಯ ಗಂಡನ ಹೆಸರಿನಲ್ಲಿ ಆಗಿರುವುದಿಲ್ಲ.
ಇದನ್ನೆ ಬಂಡವಾಳ ಮಾಡಿಕೊಂಡು ಯಾರೋ ನಮ್ಮ ಜಮೀನನ್ನು ತನ್ನ ಅತ್ತೆ ಕಮಲಾಬಾಯಿ 20/04/2024 ರಂದು ಸಾಗರ ದತ್ತಾತ್ರೇಯ ಜಾಧವ ರವರಿಗೆ ಬೆಳಗಾವಿ ಸಬ್ ರಜಿಸ್ಟರ ಕಚೇರಿಯಲ್ಲಿ ಮಾರಾಟ ಮಾಡಿರುವುದಾಗಿ ನೋಂದಣಿ ಮಾಡಿಸಿದ್ದು, ಇದು ಸಂಪೂರ್ಣ ನಕಲಿ ನೊಂದಣಿ ಎಂದು ಅಪರಾಧ ಸಂಖ್ಯೆ: 110/2024 ಕಲಂ 465 467 468 471 420 120ಬಿ ಐಪಿಸಿ ನೇದ್ದರಡಿ ಪ್ರಕರಣ ದಾಖಲು ಮಾಡಿದ್ದರು.
ಈ ಪ್ರಕರಣದ ಗಂಭೀರವಾಗಿ ತೆಗೆದುಕೊಂಡು ತನಿಖೆ ಕೈಕೊಂಡಿದ್ದ ಬೆಳಗಾವಿ ಪೊಲೀಸರು ಈ ನಾಲ್ಕು ಜನ ಲಪಂಗರನ್ನು ದಸ್ತಗೀರಿ ಮಾಡಿದಾಗ ಬಾಯಿ ಬಿಟ್ಟಿದ್ದಾರೆ.
1) ಸಾಗರ ದತ್ತಾತ್ರಯ ಜಾದವ ಸಾ: ಕಂಗ್ರಾಳಿ ಬಿಕೆ
2) ಸುರೇಶ ಯಲ್ಲಪ್ಪಾ ಬೆಳಗಾವಿ ಸಾ: ಮುತ್ಯಾನಟ್ಟಿ
3) ಶಾಂತಾ ಮೋಹನ ನಾರ್ವೇಕರ ಸಾ: ಸಾಹುಕಾರ ಗಲ್ಲಿ ಕಡೋಲಿ
4) ಹಾರೂಣ ರಶೀದ ಅಬ್ದುಲಮಜೀದ ತಹಶೀಲ್ದಾರ (HMT) ಸಾ: ಕಲ್ಮೇಶ್ವರ ಗಲ್ಲಿ ಕಡೋಲಿ ನಾಲ್ಕು ಜನ ಸೇರಿಕೊಂಡು 23 ವರ್ಷ ಹಿಂದೆ ಮೃತರಾಗಿದ್ದ ಕಮಲಾಬಾಯಿ ಯಶವಂತೆಪ್ರಭು ಅಸಗಾಂವಕರ ಹೆಸರಿನಲ್ಲಿದ್ದ ಆಸ್ತಿ ಬಾಚಿ ಗ್ರಾಮದ ರಿ.ಸ.ನಂ: 59,60,62/1 ಒಟ್ಟು 8 ಏಕರೆ. 21 ಗುಂಟೆ ಜಾಗೆಯನ್ನು ಮೃತ ಕಮಲಾಬಾಯಿ ಯಶವಂತೆ ಪ್ರಭು ಅಸಗಾಂವಕರ ಅವಳ ಹೆಸರಿನಲ್ಲಿ ಆರೋಪಿ ನಂ: 3 ಶಾಂತಾ ಮೋಹನ ನಾರ್ವೆಕರ ಇವಳನ್ನು ಮಾಲೀಕಳು ಅಂತಾ ಪ್ರತಿಬಿಂಬಿಸಿ, ಸಬ್ ರಜಿಸ್ಟಾರ್ ಕಛೇರಿಯ ಸಿಬ್ಬಂದಿಗಳಿಗೆ ಲಂಚಕೊಟ್ಟು ಬೆಳಗಾವಿ ನೋಂದಣಿ ಕಚೇರಿಯಲ್ಲಿ ಸದರಿ ಆಸ್ತಿಯನ್ನು ಆರೊಪಿ ನಂ: 1 ಇವನಿಗೆ ಖೋಟ್ಟಿ ಕಾಗದ ಪತ್ರ ತಯಾರಿಸಿ ವರ್ಗಾವಣೆ ಮಾಡಿ ವಂಚನೆ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ ನಾಲ್ಕು ಜನ ಲಪಂಗ್ ಕದಿಮರನ್ನು ಜೈಲಿಗಟ್ಟುವಲ್ಲಿ ಸಿಇಎನ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಹಾಗೂ ಡಿಸಿಪಿ ರೋಹನ್ ಜಗದೀಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಇಲ್ಲಿವರೆಗೆ ಅಮಾಯಕ ಜನರ ನೂರಾರು ಎಕರೆ ಜಮೀನು ಹಾಗೂ ನಿವೇಶನಗಳನ್ನು ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸುತ್ತಿದ್ದ ಕಡೋಲಿ ಗ್ರಾಮದ HMT ಹೆಸರಿನಿಂದಲೇ ಚಿರಪರಿಚಿತನಾಗಿದ್ದ ಹಾರೂಣ ರಶೀದ ಅಬ್ದುಲಮಜೀದ ತಹಶೀಲ್ದಾರ ಎಂಬಾತ ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವುದು ಇವರ ಅನ್ಯಾಯದಿಂದ ನೊಂದವರಿಗೆ ನೆಮ್ಮದಿ ನೀಡಿದಂತಾಗಿದೆ.