ಬೆಳಗಾವಿ : ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಮತ್ತು ಕನ್ನಡ ಭವನದ ಸಹಕಾರದಲ್ಲಿ
ಬಿ ಇಡಿ ವಿದ್ಯಾರ್ಥಿಗಳಿಂದ ಕುವೆಂಪು ಅವರ ರಾಮಾಯಣ ದರ್ಶನಂನಿಂದ ಆಯ್ದ ಭಾಗವಾಗಿರುವ ವಾಲಿ-ಸುಗ್ರೀವ ಎಂಬ ನಾಟಕ ಪ್ರದರ್ಶನವನ್ನು ಫೆಬ್ರವರಿ 5 ರಂದು ಬೆಳಗ್ಗೆ 11 ಗಂಟೆಗೆ ನೆಹರು ನಗರ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಉದ್ಘಾಟಿಸುವರು. ಮಹಾಂತೇಶ ನಗರ ಸಂಘದ ಅಧ್ಯಕ್ಷ ಲಕ್ಷ್ಮಿಕಾಂತ ಗುರವ ಅಧ್ಯಕ್ಷತೆ ವಹಿಸುವರು. ರಂಗಸಂಪರ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ, ಮಹಾಂತೇಶ ನಗರ ರಹವಾಸಿಗಳ ಸಂಘದ ಗೌರವ ಕಾರ್ಯದರ್ಶಿ ಸಂಜೀವ ಪಟ್ಟಣಶೆಟ್ಟಿ, ಸಾಹಿತಿ ಯ.ರು. ಪಾಟೀಲ, ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ನಾಗರಾಜ ಕಾಳೆ, ಶೇಖ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಐ.ಪಿ.ಸುತಾರ, ಸಾಗರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ರಾಜು ಹಳಬ, ಸಾಹಿತಿ ಹಾಗೂ ಮಹಾಂತೇಶ ನಗರ ಸಂಘದ ಬಿಎಡ್ ಕಾಲೇಜಿನ ಪ್ರಾಚಾರ್ಯೆ ಡಾ. ನಿರ್ಮಲಾ ಬಟ್ಟಲ, ರಂಗ ನಿರ್ದೇಶಕ ವೀರು ಅಣ್ಣಿಗೇರಿ ಉಪಸ್ಥಿತರಿರುವರು.