ಗುಟಗುದ್ದಿ: ಶಾಹಬಂದರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಲಬಾವಿ ಗ್ರಾಮದ ಬಡ ರೈತ ಮಾರುತಿ ಬುಡ್ರಿನಾಯ್ಕ ಅವರ ಮನೆ ಸುಟ್ಟು ಹೋಗಿ ಅಪಾರ ನಷ್ಟ ಸಂಭವಿಸಿದೆ.
ಇಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ರೈತ ಮಾರುತಿ ಅವರು ಮನೆಯ ಬಾಗಿಲು ಹಾಕಿ ಹೊಲದಲ್ಲಿ ಕಲಸ ಮಾಡುವ ಸಂದರ್ಭದಲ್ಲಿ ಏಕಾಏಕಿ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡಕ್ಕೆ ತುತ್ತಾಗಿದೆ.
ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಮನೆಯಲ್ಲಿರುವ ವಸ್ತುಗಳೊಂದಿಗೆ ಕೊಟ್ಟಿಗೆಯಲ್ಲಿದ್ದ ಎಮ್ಮೆ ಸುಟ್ಟು ಮೃತಪಟ್ಟಿದೆ. ಬಂಗಾರದ ಒಡವೆಗಳು, ಅಹಾರ ಸಾಮಗ್ರಿಗಳು ಸೇರಿದಂತೆ ಅಪಾರ ವಸ್ತುಗಳು ಹಾನಿಯಾಗಿದೆ.
ಈ ಕಾರಣದಿಂದ ರೈತನ ಮನೆಯವರ ಅಳುವಿನ ಆಕ್ರಂದನ ಈಗ ಮುಗಿಲು ಮುಟ್ಟಿದೆ.