ಬೆಳಗಾವಿ : ಚಾಲಕನ ನಿರ್ಲಕ್ಷದಿಂದಾಗಿ ಹಿಂಬದಿ ಚಲಿಸುತ್ತಿದ್ದ ಲಾರಿ ಹಾಯ್ದು ಬಾಲಕಿಯೊಬ್ಬಳು ಸಾವಿಗೀಡಾದ ಘಟನೆ ಹುಲಿಕವಿ ಗ್ರಾಮದ ಜಮೀನೊಂದರಲ್ಲಿ ಶುಕ್ರವಾರ ಸಂಭವಿಸಿದೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸೇನಗಾಂವ ತಾಲೂಕಿನ ಫೋರೆಗಾಂವ ನಿವಾಸಿ ಕೋಮಲ ಸಂತೋಷ ಫುಕಸೆ (5)ಮೃತ ಬಾಲಕಿ.
ಕಬ್ಬು ಕಟಾವು ನಿಮಿತ್ತ ಮೃತ ಬಾಲಕಿಯ ಪಾಲಕರು ಕುಟುಂಬ ಸಮೇತ ಎರಡು ತಿಂಗಳಿನಿಂದ ಇಲ್ಲಿಯೇ ವಾಸವಿದ್ದರು. ಹುಲಿಕವಿ ಗ್ರಾಮದ ಚಂದ್ರಪ್ಪ ಗುಗ್ಗರಿ ಎಂಬುವವರಗೆ ಸೇರಿದ್ದ ಜಮೀನಿನಲ್ಲಿ ಘಟನೆ ಸಂಭವಿಸಿದೆ. ಬಾಲಕಿಯ ತಂದೆ ಸಂತೋಷ ಫುಕಸೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.