ಬೆಂಗಳೂರು: ರಾಜ್ಯ ಮಾಹಿತಿ ಆಯೋಗದ ಆಯುಕ್ತರ
ನೇಮಕಕ್ಕೆ ರಾಜ್ಯ ಸರ್ಕಾರ ಕಳುಹಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲರು ಗುರುವಾರ ಅಂಕಿತ ಹಾಕಿದ್ದಾರೆ. ಮುಖ್ಯ ಆಯುಕ್ತರಾಗಿ ನಿವೃತ್ತ ಐಪಿಎಸ್ ಅಧಿಕಾರಿ ಆಶಿತ್ ಮೋಹನ್ ಪ್ರಸಾದ್ ಹೆಸರು ಅಂತಿಮಗೊಂಡರೆ, ವಿಜಯವಾಣಿಯ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ. ರಾಮನ್, ಯುವ ಬರಹಗಾರ ಹರೀಶ್ ಕುಮಾರ್, ಸಾಮಾಜಿಕ ಕಾರ್ಯಕರ್ತ ನಾರಾಯಣ ಜಿ. ಚನ್ನಾಳ್, ಪತ್ರಕರ್ತರಾದ ಎಸ್. ರಾಜಶೇಖರ್, ಕೆ. ಬದ್ರುದ್ದೀನ್ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಬಿ.ಆರ್. ಮಮತಾ ಮಾಹಿತಿ ಆಯುಕ್ತರಾಗಿ ಮುಂದಿನ ಮೂರು ವರ್ಷ ಜವಾಬ್ದಾರಿ ನಿಭಾಯಿಸುವರು.