ಬೆಳಗಾವಿ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ.
ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ, ಮಗಳು ಮೇಘಾ ಹತ್ತರವಾಠ ಹಾಗೂ ಬಿಜೆಪಿ ಮುಖಂಡ ಅರುಣ ಕೋಪರ್ಡೆ ಮೃತಪಟ್ಟಿದ್ದು ಇದರ ಜೊತೆ ಬೆಳಗಾವಿಯ ಶಿವಾಜಿ ನಗರ ನಿವಾಸಿ ಮಹಾದೇವ ಭವನೂರು ಎಂಬ ಮಹಿಳೆ ಸಾವನ್ನಪಿರುವುದಾಗಿ ಮಹಿಳೆಯ ಪತಿ ಸ್ಪಷ್ಟಪಡಿಸಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಮೃತರ ಮನೆಗಳಿಗೆ ಉತ್ತರ ಕ್ಷೇತ್ರದ ಶಾಸಕ ಆಸೀಫ ಸೇಠ್ ಹಾಗೂ ತಹಶೀಲ್ದಾರ್ ಬಸವರಾಜ ಭೇಟಿ ನೀಡಿ ಸಾಂತ್ವನ ಹೇಳಿದ್ದು ಜೊತೆಗೆ ಮೃತರ ಕುಟುಂಬಸ್ಥರಿಗೆ 2 ಲಕ್ಷ ರೂ.ಪರಿಹಾರ ನೀಡುವ ಭರವಸೆ ನೀಡಿದರು.