ಬೆಳಗಾವಿ: ಚಿಕ್ಕೋಡಿಯ ಖಾಸಗಿ ಕಾಲೇಜು ಅತಿಥಿ ಉಪನ್ಯಾಸಕ ರಾಹುಲ್ ಓತಾರಿ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ಪೋಷಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ. ಉಪನ್ಯಾಸಕನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿ ಪೋಷಕರಿಗೆ ವಿಷಯ ವಿವರಿಸಿದ್ದಾಳೆ. ನೆರೆಹೊರೆಯವರೊಂದಿಗೆ ಕಾಲೇಜಿಗೆ ಬಂದ ವಿದ್ಯಾರ್ಥಿನಿಯ ಪೋಷಕರು ಉಪನ್ಯಾಸಕನಿಗೆ ಕಪಾಳಮೋಕ್ಷ ಮಾಡಿ ಥಳಿಸಿದ್ದಾರೆ. ಮಾತ್ರವಲ್ಲ, ಉಪನ್ಯಾಸಕನ ಮೊಬೈಲ್ ಪರಿಶೀಲಿಸಿದ್ದಾರೆ. ಮೊಬೈಲ್ ನಲ್ಲಿ ಯುವತಿಯರ ಅಶ್ಲೀಲ ಫೋಟೋಗಳು ಪತ್ತೆಯಾಗಿವೆ.