ಬೆಳಗಾವಿ : ಬಿಜೆಪಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಚೇರಿಯಲ್ಲಿ ಅಟಲ್ ಜೀ ಜನ್ಮ ಶತಮಾನೋತ್ಸವ ಸಮಿತಿಯ ಸಭೆಯನ್ನು ಉದ್ದೇಶಿಸಿ ಸುಭಾಷ್ ಪಾಟೀಲ ಅವರು ಮಾತನಾಡಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷದ ಆಚರಣೆಗೆ ಜಿಲ್ಲಾ ತಂಡವನ್ನು ರಚಿಸಲಾಗಿದೆ ಎಂದು ವಿವರಿಸಿದರು.
ಬಹುಮುಖಿ ವ್ಯಕ್ತಿತ್ವದ ಅಟಲ್ ಜೀ ಅವರ ಜನ್ಮದಿನದ ಶತಮಾನೋತ್ಸವದ ಸಂದರ್ಭದಲ್ಲಿ ಬೂತ್, ಮಂಡಲ, ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರ
ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಅಟಲ್ಜಿ ಅವರ ಪುಸ್ತಕ,
ಸಾಹಿತ್ಯಗಳ ಪ್ರದರ್ಶನ,ಭಾಷಣ ಸ್ಪರ್ಧೆ,ಕಾರ್ಯಕರ್ತರ ಸನ್ಮಾನ, ಅಟಲ್ಜೀ ಅವರ ಅಪಾರ ಕೊಡುಗೆಗಳ ಪ್ರದರ್ಶನ ನಡೆಯಲಿದೆ ಎಂದು
ತಿಳಿಸಿದರು.
ಫೆ.15ರಿಂದ ಮಾರ್ಚ್ 15ರವರೆಗೆ ಜಿಲ್ಲಾ ಮಟ್ಟದಲ್ಲಿ ಅಟಲ್ ವಿರಾಸತ್ ಸಮ್ಮೇಳನ
ಆಯೋಜಿಸಲಾಗುವುದು. ಅಲ್ಲಿಯೂ ಅಟಲ್ಜೀ ಅವರ ಬಗ್ಗೆ ಹಲವಾರು ಪುಸ್ತಕಗಳ ಪ್ರದರ್ಶನ,
ಹಿರಿಯರ ಗೌರವ, ಅಟಲ್ಜೀ ಅವರ ಹೋರಾಟದ ದಾರಿಯಲ್ಲಿ ಬೆಳೆದುಬಂದ ವ್ಯಕ್ತಿಗಳಿಗೆ ಗೌರವ
ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಅಟಲ್ಜೀ ಅವರು ದೇಶದ ಅಪರೂಪದ ನಾಯಕ, ಯುವಪೀಳಿಗೆ ಮತ್ತು ನಾಗರಿಕರಿಗೆ ಅವರ
ಕೊಡುಗೆ- ಸಾಧನೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದು ಹೇಳಿದರು. ಇದಕ್ಕಾಗಿ ಎಲ್ಲ
ರೀತಿಯ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸಮಿತಿಯಲ್ಲಿ ಜಿಲ್ಲಾ ಸಂಚಾಲಕರಾಗಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ,ಸಹ ಸಂಚಾಲಕರಾಗಿ ಸಚಿನ್ ಕಡಿ, ಸುಭಾಷ್ ಸಣ್ಣವೀರಪ್ಪನವರ, ಸುನಿಲ್ ಮಡ್ಡಿಮನಿ ಅವರು ಕಾರ್ಯ ನಿರ್ವಹಿಸುವರು
ಎಂದು ಹೇಳಿದರು.
ಮಾಜಿ ಶಾಸಕ ಹಾಗೂ ಅಭಿಯಾನದ ಜಿಲ್ಲಾ ಸಂಚಾಲಕ ಮಹಾಂತೇಶ ದೊಡ್ಡಗೌಡರ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಮಂಡಲಗಳಲ್ಲೂ
ಈ ಸಂಬಂಧ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಅಟಲ್ ಜೀ ಅವರ ರಾಜ್ಯ ಪ್ರವಾಸ
ಸಂಬಂಧ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದೇವೆ. ಫೋಟೊಗಳು, ಸ್ಮರಣಫಲಕಗಳನ್ನು ಸಂಗ್ರಹಿಸುವ
ಯೋಜನೆಯೂ ಇದೆ ಎಂದು ತಿಳಿಸಿದರು. ಫೆ. 14ರಂದು ಸಂಗ್ರಹಿತ ಮಾಹಿತಿಯ ಪ್ರದರ್ಶಿನಿಯೂ
ನಡೆಯುತ್ತದೆ ಎಂದರು.
ಜಿಲ್ಲೆಯ ಸಹ ಸಂಚಾಲಕ ಸಚಿನ್ ಕಡಿ, ಸುಭಾಷ್ ಸಣ್ಣವೀರಪ್ಪನವರ, ಸುನಿಲ್ ಮಡ್ಡಿಮನಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ದೇಶಪಾಂಡೆ, ಧನಶ್ರೀ ದೇಸಾಯಿ,ಜಿಲ್ಲಾ ಉಪಾಧ್ಯಕ್ಷ ವಿನಯ್ ಕದಂ, ಕೋಶಾಧ್ಯಕ್ಷ ಸಂತೋಷ ದೇಶನೂರ, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ್ ಕೊಲಕಾರ, ಮಾಧ್ಯಮ ಸಹ ಪ್ರಮುಖ ಬಾಳೇಶ ಚವ್ವನ್ನವರ ಹಾಗೂ ಪ್ರಮುಖ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು ವೀರಭದ್ರ ಪೂಜಾರಿ ನಿರೂಪಿಸಿದರು ಸುಭಾಷ್ ಸಣ್ಣವೀರಪ್ಪನವರ ವಂದಿಸಿದರು