ಬೆಳಗಾವಿ: 25-01-2025 ರಂದು ನಿಗದಿಪಡಿಸಲಾದ KPSC ಪರೀಕ್ಷೆಗಳ ದೃಷ್ಟಿಯಿಂದ ಮತ್ತು ಮಾನ್ಯ ಉಪಕುಲಪತಿಗಳ ನಿರ್ದೇಶನದಂತೆ 3 ವರ್ಷ ಮತ್ತು 5 ವರ್ಷಗಳ ಎಲ್.ಎಲ್.ಬಿ. 25ನೇ ಜನವರಿ 2025 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು 20ನೇ ಫೆಬ್ರವರಿ 2025ಕ್ಕೆ ಮುಂದೂಡಲಾಗಿದೆ. ಮುಂದೂಡಲ್ಪಟ್ಟ ದಿನಾಂಕಗಳ ವಿವರಗಳನ್ನು ಸುತ್ತೋಲೆಯೊಂದಿಗೆ ಲಗತ್ತಿಸಲಾಗಿದೆ. ಸಮಯದ ಬದಲಾವಣೆ ಇಲ್ಲ.
ಇತರ ನಿಗದಿತ ಪರೀಕ್ಷೆಗಳು ಬದಲಾಗದೆ ಇರುತ್ತವೆ. ಇದನ್ನು ಸಂಬಂಧಪಟ್ಟ ಎಲ್ಲ ವಿದ್ಯಾರ್ಥಿಗಳ ಗಮನಕ್ಕೆ ತರಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.