ಬೆಳಗಾವಿ: ಶಿಕ್ಷೆ ಅವಧಿ ಪೂರ್ಣಗೊಂಡು ದಂಡದ ಹಣ ತುಂಬಲಾರದೆ ಹಿಂಡಲಗಾ ಜೈಲಿನಲ್ಲಿ ಉಳಿದಿದ್ದ ಮಹಿಳೆಯನ್ನು ಸಾಮಾಜಿಕ ಕಾರ್ಯಕರ್ತರು ದಂಡ ತುಂಬಿ ಬುಧವಾರ ಬಿಡುಗಡೆ ಮಾಡಿಸುವಲ್ಲಿ ನೆರವಾಗಿದ್ದಾರೆ.
ಲಕ್ಷ್ಮಿ ತಳವಾರ ಜೈಲಿನಿಂದ ಬಿಡುಗಡೆಯಾದವರು. ಜೈಲು ಅಧೀಕ್ಷಕ ಕೃಷ್ಣಮೂರ್ತಿ, ಕೆ ಎಸ್ ಟಿ ಸೂಪರಿಟೆಂಡೆಂಟ್ ಮಲ್ಲಿಕಾರ್ಜುನ ಕೊಣ್ಣೂರ ಅವರು ಮಾಜಿ ಮೇಯರ್ ವಿಜಯ ಮೋರೆ ಅವರ ಗಮನಕ್ಕೆ ವಿಷಯವನ್ನು ತಂದಿದ್ದಾರೆ. ವಿದ್ಯಾ ಕೋಟಿ, ಮದನಕುಮಾರ ಭೈರಪ್ಪನವರ, ನಂದು ಪಿವಿಜಿ, ಅಲನ್ ವಿಜಯ ಮೋರೆ, ಅದ್ವತ್ ಚವ್ಹಾಣ ಪಾಟೀಲ ಉಪಸ್ಥಿತರಿದ್ದರು.