ಮೂಡಲಗಿ: ಬಿ.ಎಸ್. ಎನ್. ಎಲ್. ಬೆಳಗಾವಿ ಜಿಲ್ಲಾ ದೂರಸಂಪರ್ಕ ಸಲಹಾ ಸಮಿತಿಗೆ ಐವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಶಿಫಾರಸ್ಸಿನ್ ಮೇರೆಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿದ ಬಗ್ಗೆ ಕೇಂದ್ರ ಸಂವಹನ ಇಲಾಖೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಆದೇಶ ಹೊರಡಿಸಿದ್ದಾರೆ.
ಮೂಡಲಗಿ ತಾಲೂಕಿನ ಬಾಳೇಶ ಸಕ್ರೆಪ್ಪಗೋಳ (ನಾಗನೂರ), ಸದಾಶಿವ ಮಾವರಕರ (ಹಳ್ಳೂರ), ಗೋಕಾಕ ತಾಲೂಕಿನ ಬಸವರಾಜ ಹುಳ್ಳೇರ (ಗೋಕಾಕ), ಸಿದ್ದಪ್ಪ ಬಿಸಗುಪ್ಪಿ (ಕೌಜಲಗಿ), ಸವದತ್ತಿ ತಾಲೂಕಿನ ಜಗದೀಶ ಹನಸಿ (ಹೂಲಿ) ಇವರನ್ನು ಎರಡು ವರ್ಷಗಳ ಅವಧಿಗೆ ನೇಮಕವಾಗಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.