ಕಂಕೇರ್: ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ಕಟ್ಟಿಗೆ ತರಲು ಕಾಡಿಗೆ ತೆರಳಿದ್ದ ತಂದೆ-ಮಗನ ಮೇಲೆ ಕೋಪಗೊಂಡ ಕರಡಿ ಮಾರಣಾಂತಿಕವಾಗಿ ದಾಳಿ ಮಾಡಿ ಕೊಂದುಹಾಕಿದೆ. ಸುಕ್ಲಾಲ್ ದರ್ರೋ (45) ಮತ್ತು ಅಜ್ಜು ಕುರೇಟಿ (22) ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಕರಡಿ ದಾಳಯಿಂದ ಸಾವಿಗೀಡಾಗಿದ್ದಾರೆ.
ಒಡಿಶಾ-ಛತ್ತೀಸ್ಗಢ ಗಡಿಯಲ್ಲಿರುವ ಛತ್ತೀಸ್ಗಢದ ಕಂಕೇರ್ ಜಿಲ್ಲೆಯ ದಂಗರಕ್ತ ಗ್ರಾಮದ ಬಳಿಯ ಜೆಲಂಕಾಸ ಅರಣ್ಯದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಸಿಬ್ಬಂದಿ ಮೇಲೆ ಕರಡಿಯ ಭೀಕರ ದಾಳಿಯು ವೀಡಿಯೊದಲ್ಲಿ ರೆಕಾರ್ಡ್ ಆಗಿದ್ದು, ವೈರಲ್ ಆಗಿದೆ. ಮಗ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ, ದರ್ರೋ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. ಅರಣ್ಯ ಸಿಬ್ಬಂದಿಗೆ ಗಾಯವಾಗಿದೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಹಾಗೂ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಇಬ್ಬರನ್ನೂ ರಕ್ಷಿಸಲು ಮುಂದಾಗಿದೆ. ಈ ವೇಳೆ ಕರಡಿ ಅರಣ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿದೆ. ಕರಡಿಯಿಂದ ದರ್ರೋ ಮತ್ತು ಕುರೇಟಿಯನ್ನು ರಕ್ಷಿಸಲು ಧೈರ್ಯದಿಂದ ನುಗ್ಗಿದ ಅರಣ್ಯ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ವೀಡಿಯೊದಲ್ಲಿ, ಕರಡಿ ಕೋಪದಿಂದ ಮೂವರ ಮೇಲೆ ದಾಳಿ ಮಾಡಲು ಕಾಡಿನಲ್ಲಿ ಓಡುತ್ತಿರುವುದು ಕಂಡುಬಂದಿದೆ. ಸಮವಸ್ತ್ರದಲ್ಲಿದ್ದ ಅರಣ್ಯ ಸಿಬ್ಬಂದಿ ಮೇಲೆ ಪ್ರಾಣಿ ದಾಳಿ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ. ಕರಡಿ ತನ್ನ ತೋಳುಗಳಲ್ಲಿ ಅವರನ್ನು ಹಿಡಿದುಕೊಂಡು ಅಧಿಕಾರಿಯ ಮೇಲೆ ಕುಳಿತು ಕಚ್ಚುತ್ತಿರುವುದು ಕಂಡುಬಂದಿದೆ.
ಹತ್ತಿರದಲ್ಲಿದ್ದ ಇತರರು ಕರಿಡಿ ಮೇಲೆ ಕೋಲು ಹಾಗೂ ಕಟ್ಟಿಗೆಯ ತುಂಡುಗಳನ್ನು ಎಸೆದಿರುವುದು ಕಂಡುಬಂದಿದೆ.
ಅರಣ್ಯ ಸಿಬ್ಬಂದಿಯನ್ನು ನಾರಾಯಣ ಯಾದವ್ ಎಂದು ಗುರುತಿಸಲಾಗಿದ್ದು, ಅವರ ಕೈಗಳಿಗೆ ಗಾಯಗಳಾಗಿದ್ದು, ಗಂಭೀರ ಗಾಯಗಳಾಗಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ, ಅಧಿಕಾರಿಗಳು ನಂತರ ಜೆಸಿಬಿಗಳನ್ನು ಬಳಸಿ ತಂದೆ ಮತ್ತು ಮಗನ ಮೃತ ದೇಹಗಳನ್ನು ಕಾಡಿನಿಂದ ಹೊರತೆಗೆದರು.
ಕರಡಿ ಇನ್ನೂ ಸಿಕ್ಕಿಲ್ಲ. ಇತ್ತೀಚೆಗಷ್ಟೇ ನಡೆದ ಘಟನೆಯಿಂದ ಇಬ್ಬರ ಪ್ರಾಣಕ್ಕೆ ಕುತ್ತು ಬಂದಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.