ಹಿರೇಬಾಗೇವಾಡಿ: ಬಸ್ತವಾಡ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಹಾಲಿ ಹಿರೇಬಾಗೇವಾಡಿ ಬಸವನಗರ ನಿವಾಸಿ ಜಿನೇಂದ್ರ ನೇಮಿನಾಥ ಅಗಸಿಮನಿ (24) ಮೃತರು. ಭಾನುವಾರದಂದು ಬಸ್ತವಾಡ ಕ್ರಾಸ್ ಬಳಿ ಧಾರವಾಡ- ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವಾಗಿತ್ತು. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.