ಬೆಳಗಾವಿ ತಾಲೂಕಿನ ಪಂಚಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಈರಪ್ಪಾ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನ್ಯಾಯಬೆಲೆ ಅಂಗಡಿಕಾರರ ವಿಶೇಷ ಸಭೆಯನ್ನು 18-01-2025 ರಂದು ನಡೆಯಿತು. ಸಭೆಯಲ್ಲಿ ಪಡಿತರ ಚೀಟಿದಾರರ ಡಿಬಿಟಿ ಹಾಗೂ ಇಕೆವೈಸಿ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಡಿಬಿಟಿ (DBT) ಹಾಗೂ ಇಕೆವೈಸಿ (EKYC) ಕಾರ್ಯವನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ಕಟ್ಟ ಕಡೆಯ ಯಾವೊಬ್ಬ ಫಲಾನುಭವಿ ಕೂಡ ವಂಚಿತರಾಗಬಾರದು ಎಂದು ಸೂಚಿಸಿದರು. ಆಹಾರ ಇಲಾಖೆಯ ಅಧಿಕಾರಿಗಳಾದ ಎಂ ಎನ್ ಉಸ್ತಾದ, ಆಹಾರ ಶಿರಸ್ತೆದಾರರು ಹಾಗೂ ಆಹಾರ ನಿರೀಕ್ಷಕರಾದ ಸುರೇಶ ಉಪ್ಪಾರ & ಬೆಳಗಾವಿ ಗ್ರಾಮೀಣ ಪ್ರದೇಶದ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಉಪಸ್ಥಿತರಿದ್ದರು