ಬೆಳಗಾವಿ : ರಾಜ್ಯದಲ್ಲಿ 40 ಲಕ್ಷ ಜೈನರು ಇದ್ದಾರೆ. ರಾಜ್ಯ ಸರ್ಕಾರ ಜೈನ ನಿಗಮ ಮಂಡಳಿ ಸ್ಥಾಪನೆ ಮಾಡಬೇಕೆಂಬ ಬೇಡಿಕೆಗೆ ನನ್ನ ಸಹಮತವೂ ಇದೆ ಎಂದು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಅಧ್ಯಕ್ಷ ಸುರೇಂದ್ರಕುಮಾರ ಹೆಗ್ಗಡೆ ಅವರು ಹೇಳಿದರು.
ಉಗಾರದಲ್ಲಿ ಹಮ್ಮಿಕೊಂಡಿದ್ದ ಜೈನ ಧರ್ಮದ ಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಜೈನ ಅಸೋಸಿಯೇಷನ್ ಉಪಾಧ್ಯಕ್ಷ ಶೀತಲಗೌಡ ಪಾಟೀಲ ಅವರು ಸಮಾಜದ ಅಭಿವೃದ್ಧಿಗೋಸ್ಕರ ಶ್ರಮಿಸುತ್ತಿದ್ದಾರೆ. ಯುವಕರಿಗೆ ಒಳ್ಳೆಯ ಸ್ಥಾನಮಾನ ನೀಡಿ, ಸಮಾಜದ ಅಭಿವೃದ್ಧಿಗೆ ಸಹಕರಿಸುವುದು ನನ್ನ ಗುರಿಯಾಗಿದೆ. ಮತ್ತಷ್ಟು ಸಮಾಜಮುಖಿ ಕಾರ್ಯ ಮಾಡಲು ಶೀತಲಗೌಡ ಪಾಟೀಲರಿಗೆ ರಾಷ್ಟ್ರೀಯ ಮಟ್ಟದ ಜೈನ ಸಮಾಜದ ಹುದ್ದೆ ನೀಡಲಾಗುವುದು ಎಂದು ತಿಳಿಸಿದರು.