ಬೆಳಗಾವಿ: ನಗರದ ಪ್ರೇರಣಾ ಮಹಾವಿದ್ಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಗರ ವಲಯ ಇವರ ಸಹಯೋಗದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ದಿನದ ಪುನಶ್ಚೇತನ ಕಾರ್ಯಾಗಾರವನ್ನು ಕೆಎಲ್ಇ ಸಂಸ್ಥೆಯ ಡಾಕ್ಟರ್ ಎಚ್ ಬಿ ರಾಜಶೇಖರ ಸಭಾಗೃಹದಲ್ಲಿ ದಿನಾಂಕ 17ನೇ ಜನವರಿ 2025 ರಂದು ಆಯೋಜಿಸಲಾಗಿತ್ತು . ಮುಖ್ಯ ಅತಿಥಿಗಳಾಗಿ ಆಗಮಿಸಿದ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರವಿ ಭಜಂತ್ರಿ ಅವರು ಮಾತನಾಡುತ್ತಾ ” ವಿದ್ಯಾರ್ಥಿ ಕಲಿತ ಒಂದೊಂದು ಅಕ್ಷರಗಳು ನಮ್ಮ ಜೀವನವನ್ನು ರೂಪಿಸುವ ಅಮೂಲ್ಯಾಕ್ಷರಗಳು, ಪ್ರತಿ ವಿದ್ಯಾರ್ಥಿಯ ಜೀವನದಲ್ಲಿ ಗುರುವಿನ ಪಾತ್ರ ಬಹು ಮಹತ್ತರವಾದದ್ದು” ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾದ ಬೆಳಗಾವಿ ತಾಲೂಕು ಪಂಚಾಯಿತಿ ಶಿಕ್ಷಣ ಅಧಿಕಾರಿಗಳಾದ ರಮೇಶ ಹೆಡಗಿ ಅವರು ಮಾತನಾಡುತ್ತಾ ” ವಿದ್ಯಾರ್ಥಿಗಳು ಕಲಿಯಬೇಕೆಂದು ಪಣತೊಟ್ಟಾಗ ಹಿಂತಿರುಗಿ ನೋಡಬಾರದು , ಗುರಿಯತ್ತ ಮಾತ್ರ ಲಕ್ಷವಿರಬೇಕು ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಪುನಶ್ಚೇತನ ಕಾರ್ಯಕ್ರಮದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾಗಿ, ಆಗಮಿಸಿ ದಾವಣಗೆರೆಯ ಎಂವಿ ಕಾಲೇಜಿನ ಉಪನ್ಯಾಸಕರಾದ ಪದ್ಮನಾಭ ಜೆ ಹಾಗೂ ಹೊಸಕೇರಿಯ ಜಿ ಸಿ ಕಾಲೇಜಿನಿಂದ ವೆಂಕಟೇಶ್ ಎಂ ಎಸ್ ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿಗಳಾದ ಐ ಬಿ ಹಿರೇಮಠ , ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ರಿಜ್ವಾನ್ ನಾವಗೆೇಕರ್, ಪ್ರೇರಣಾ ಕಾಲೇಜಿನ ಮುಖ್ಯಸ್ಥರಾದ ಗಿರೀಶ್ ದಂಡಣ್ಣವರ್, ಸಹ ಮುಖ್ಯಸ್ಥರಾದ ಅಮಿತ್ ವಾಗರಾಳಿ, ಪ್ರೇರಣಾ ಕಾಲೇಜಿನ ಪ್ರಾಚಾರ್ಯರಾದ ಪ್ರಶಾಂತ ಗೌಡರ, ಮತ್ತು ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ನಗರದ 43 ವಿವಿಧ ಶಾಲೆಗಳಿಂದ ಸುಮಾರು 600 ವಿದ್ಯಾರ್ಥಿಗಳು, ಹಾಗೂ ಶಿಕ್ಷಕರು ಈ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉಪನ್ಯಾಸಕಿ ನಿಶಾ ಕದಮ ಅವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು