ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಯ ಕಾಮಗಾರಿಗಳು ಮುಂದುವರೆದಿದ್ದು, ಹಿಂಡಲಗಾ, ಮಣ್ಣೂರ, ಗೋಜಗೆ, ಅತವಾಡ, ಕೋವಾಡ್ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕಾಗಿ ಬೆಕ್ಕಿನಕೇರಿ ಗ್ರಾಮದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಭೂಮಿ ಪೂಜೆ ನೆರವೇರಿಸಿದರು.
ನಾಲ್ಕೂವರೆ ವರ್ಷಗಳಲ್ಲಿ ಬಹುತೇಕ ಜನರ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯ ಗುರಿ ಹೊಂದಿದ್ದು ಜನತೆಯ ಸಹಕಾರ ಅಗತ್ಯ ಎಂದರು.
ಈ ಸಮಯದಲ್ಲಿ ಆಯಾ ಗ್ರಾಮಗಳ ಹಿರಿಯರು, ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಬ್ಬುಬಾಯಿ ಕಾಂಬಳೆ, ಉಪಾಧ್ಯಕ್ಷ ಭರ್ಮಾ ಹೊರಕೇರಿ, ಸದ್ಯಸ್ಯರಾದ ಭಾವಕು ಸಾವಂತ, ಬಲವಂತ ಬೊಗನ್, ರಾಜು ಸಾವಂತ, ಲಕ್ಷ್ಮೀ ಸಾವಂತ್ಲ್, ಲಕ್ಷ್ಮೀ ಗಾವಡೆ, ಮಾರುತಿ ಖಾದರವಾಡ್ಕರ್ , ರಘುನಾಥ್ ಖಂಡೇಕರ್, ಮಲ್ಲಪ್ಪ ಗಾವಡೆ, ನಾರಾಯಣ ಸಾವಂತ, ಅರುಣ ಗಾವಡೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.