ಜನ ಜೀವಾಳ ಜಾಲ: ಬೆಳಗಾವಿ: ಇಲ್ಲಿನ ಸಾರ್ವಜನಿಕ ವಾಚನಾಲಯ ವತಿಯಿಂದ ನೀಡಲಾಗುವ 2024ನೇ ಸಾಲಿನ ಉತ್ತಮ ಪತ್ರಕರ್ತ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಲಾಗಿದೆ.
ಕನ್ನಡ ವಿಭಾಗದಲ್ಲಿ ಹಿರಿಯ ಪತ್ರಕರ್ತ ಚಂದ್ರಕಾಂತ ಸುಗಂಧಿ, ಮರಾಠಿ ವಿಭಾಗದಲ್ಲಿ ಹಿರಿಯ ಪತ್ರಕರ್ತ ಸಂಜಯ ಸೂರ್ಯವಂಶಿ ಆಯ್ಕೆಯಾಗಿದ್ದಾರೆ.ಪ್ರೊ. ಎಸ್.ಆರ್.ಜೋಗ ಮಹಿಳಾ ಪತ್ರಕರ್ತರ ಪ್ರಶಸ್ತಿಗೆ ಕನ್ನಡ ವಿಭಾಗದಲ್ಲಿ ಲಾವಣ್ಯ ಅನಿಗೋಳ,
ಮರಾಠಿ ವಿಭಾಗದಲ್ಲಿ ನೀಲಿಮಾ ಲೋಹಾರ ಅವರನ್ನು ಆಯ್ಕೆ ಮಾಡಲಾಗಿದೆ.
ಜನವರಿ 18ರಂದು ಸಂಜೆ 5.30ಕ್ಕೆ ನಗರದ ಹಿಂದವಾಡಿಯ ಗುರುದೇವ ರಾನಡೆ ಮಂದಿರದ ಎಸಿಪಿಆರ್ ಸಭಾಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.