ಬೆಳಗಾವಿ :
ಮುತಗಾ ಗ್ರಾಮದಲ್ಲಿ ನೂತನವಾಗಿವಾಗಿ ನಿರ್ಮಿಸಲಾದ ಬ್ರಾಹ್ಮಣರ ಸ್ಮಶಾನ ಭೂಮಿಯ ಅಭಿವೃದ್ಧಿಗಾಗಿ ಧನ ಸಹಾಯ ಮಾಡಲು ತಾವು ಸದಾ ಸಿದ್ಧ ಎಂಬ ಭರವಸೆಯನ್ನು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ನೀಡಿದರು.
ಮುತಗಾ ಗ್ರಾಮದಲ್ಲಿ ಬ್ರಾಹ್ಮಣ ಸಮಾಜದವರಿಗಾಗಿ ಪ್ರತ್ಯೇಕ ಸ್ಮಶಾನಭೂಮಿ ಇರಲಿಲ್ಲ. ಬ್ರಾಹ್ಮಣ ಕುಟುಂಬಗಳಿಂದ ದೇಣಿಗೆ ಸಂಗ್ರಹಿಸಿ ಇದೀಗ ಸ್ಮಶಾನ ಭೂಮಿಯನ್ನು ನಿರ್ಮಿಸಲಾಗಿದ್ದು, ಮಳೆಗಾಲದಲ್ಲಿ ದಹನ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಒಂದು ದಹನ ಒಲೆ ಮತ್ತು ನೀರು ತಾಗದಂತೆ ಕಬ್ಬಿಣದ ಛಾವಣಿ (ಶೆಲ್ಟರ್) ನಿರ್ಮಿಸಬೇಕಾಗಿದೆ. ಅದಕ್ಕೆ ಸುಮಾರು 4ಲಕ್ಷ ರೂ. ವೆಚ್ಚವಾಗುತ್ತದೆ. ಸರಕಾರದ ಅನುದಾನದಿಂದ ಅದಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮುತಗಾ ಬ್ರಾಹ್ಮಣ ಸಂಘದಿಂದ ಲಿಖಿತ ಮನವಿ ಮಾಡಿಕೊಂಡಾಗ ಶಾಸಕಿ ಹೆಬ್ಬಾಳಕರ ಮೇಲಿನಂತೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಸದಸ್ಯೆ ಮೀರಾ ದೇಶಪಾಂಡೆ, ಸಂಘದ ಅಧ್ಯಕ್ಷ ಆರ್. ಆರ್. ಪದಕಿ, ಕಾರ್ಯದರ್ಶಿ ಎಚ್. ಆರ್. ಪ್ರಸಾದ, ರಮೇಶ ದೇಶಪಾಂಡೆ, ಅನಂತ ಜೋಶಿ, ವಸಂತ ಕಟ್ಟಿ, ಅವಿನಾಶ ಕುಲಕರ್ಣಿ ಮುಂತಾದವರು ಹಾಜರಿದ್ದರು.