ಬೆಳಗಾವಿ : ಸಂಸ್ಕೃತ ಪ್ರಭಾ ರಾಜ್ಯ ಸಮ್ಮೇಳನ ನಗರದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶಾರದಾ ಕುಲಕರ್ಣಿ, ಸಂಸ್ಕೃತವು ಸಂಭಾಷಣೆಯಿಂದ ಶಾಸ್ತ್ರದ ಕಡೆಗೆ ಹೋಗಬೇಕಾಗಿದೆ ಎಂದು ತಿಳಿಸಿದರು.
ಅಶೋಕ ಗಾಂಗೋಡ್ಕರ್ ಮಾತನಾಡಿ, ಎಲ್ಲ ಭಾಷೆಗಳ ಜನನಿ ಸಂಸ್ಕೃತ ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿದ್ದ ರಾಜ್ಯ ಪ್ರಶಿಕ್ಷಣದ ಪ್ರಮುಖ ರಾಮಕೃಷ್ಣ ಅವರು, ಸಂಸ್ಕೃತದ ಪ್ರಸಾರ ಪ್ರಚಾರಕ್ಕಾಗಿ ನಾವು ಬೌದ್ಧಿಕದ ಯುದ್ಧದಲ್ಲಿದ್ದೇವೆ. ಆದ್ದರಿಂದ ನಾವೆಲ್ಲರೂ ಸಂಸ್ಕೃತಕ್ಕಾಗಿ ಪ್ರಾಣವನ್ನು ಕೊಡುವುದಕ್ಕೆ ತಯಾರಾಗಬೇಕಾಗಿದೆ ಎಂದು ಹೇಳಿದರು.
ಸಂಸ್ಕೃತ ಪ್ರಭಾ ರಾಜ್ಯ ಸಮ್ಮೇಳನದಲ್ಲಿ ರಾಜ್ಯದ 19 ಜಿಲ್ಲೆಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು ಸಮ್ಮೇಳನದಲ್ಲಿ ಒಟ್ಟು 600 ಪ್ರತಿನಿಧಿಗಳು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸಂಘಟನಾ ಮಂತ್ರಿಯಾಗಿರುವ ಲಕ್ಷ್ಮೀನಾರಾಯಣ ಅವರು ಸಮ್ಮೇಳನವು ಅತ್ಯಂತ ಯಶಸ್ವಿಯಾಗಿದೆ. ಕಾರ್ಯಕರ್ತರಲ್ಲಿ ಹೊಸ ಉತ್ಸಾಹವನ್ನು ತುಂಬಲಾಗಿದೆ ಅದರ ಜೊತೆಗೆ ಕಾರ್ಯಕ್ಷೇತ್ರದ ವಿಕಾಸ ಆಗಬೇಕು, ಕಾರ್ಯಕರ್ತರ ವಿಕಾಸ ಆಗಬೇಕು ಮತ್ತು ಸಂಘಟನಾತ್ಮಕ, ಪ್ರಚಾರಾತ್ಮಕ, ಶಿಕ್ಷಣಾತ್ಮಕ ಕ್ಷೇತ್ರದಲ್ಲಿ ಸಂಸ್ಕೃತ ಭಾಷೆಯನ್ನು ಸಾಧನವಾಗಿಟ್ಟುಕೊಂಡು ನಾವು ಸಮಾಜದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು. ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಮತ್ತು ಅಭೂತಪೂರ್ವ ವಾಗಿ ನಡೆದಿದೆ ಎಂದು ತಿಳಿಸಿದರು.