ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಐದು ಪಂದ್ಯಗಳ ಸರಣಿಯು ಜನವರಿ 22 ರಿಂದ ನಡೆಯಲಿದೆ.
ಹಾಲಿ ವಿಶ್ವ ಟಿ20 ಚಾಂಪಿಯನ್ ಆಗಿರುವ ಭಾರತದ ತಂಡವು ಬಾರ್ಬಡೋಸ್ನಲ್ಲಿ ಟ್ರೋಫಿ ಗೆದ್ದ ನಂತರ ಇದುವರೆಗೆ ಯಾವುದೇ ಸರಣಿಯನ್ನು ಕಳೆದುಕೊಂಡಿಲ್ಲ.
ಐದು ಪಂದ್ಯಗಳ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಗೆ ತಂಡದ ಪ್ರಮುಖ ಅಂಶವೆಂದರೆ ವೇಗಿ ಮೊಹಮ್ಮದ್ ಶಮಿ 14 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದಾರೆ. ಭಾರತದ ಟೆಸ್ಟ್ ತಂಡದ ಪ್ರಮುಖ ಸದಸ್ಯರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಹರ್ಷಿತ್ ರಾಣಾ ಮತ್ತು ನಿತೀಶಕುಮಾರ ರೆಡ್ಡಿ ತಂಡಕ್ಕೆ ಮರಳಿದ್ದಾರೆ. ಧ್ರುವ್ ಜುರೆಲ್ ತಂಡದಲ್ಲಿ ಹೊಸ ಮುಖವಾಗಿದ್ದು, ಸ್ಯಾಮ್ಸನ್ ನಂತರ ಎರಡನೇ ಕೀಪರ್ ಆಗಿ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಭಾರತ ಟಿ20 ತಂಡ : ಸೂರ್ಯಕುಮಾರ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ ಶರ್ಮಾ, ತಿಲಕ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶಕುಮಾರ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಭಾರತ-ಇಂಗ್ಲೆಂಡ್ T20 ಸರಣಿಯ ವೇಳಾಪಟ್ಟಿ (ಎಲ್ಲ ಪಂದ್ಯಗಳು ಸಂಜೆ 7 ರಿಂದ ಪ್ರಾರಂಭವಾಗಲಿದೆ)
ಮೊದಲನೇ ಪಂದ್ಯ-ಜನವರಿ 22 (ಕೋಲ್ಕತ್ತಾ)
ಎರಡನೇ ಪಂದ್ಯ- ಜನವರಿ 25 (ಚೆನ್ನೈ)
ಮೂರನೇ ಪಂದ್ಯ- ಜನವರಿ 28 (ರಾಜಕೋಟ)
ನಾಲ್ಕನೇ ಪಂದ್ಯ – ಜನವರಿ-31 (ಪುಣೆ)
ಐದನೇ ಪಂದ್ಯ- ಫೆಬ್ರವರಿ 02 (ಮುಂಬೈ)