ವಾಷಿಂಗ್ಟನ್: ಇಷ್ಟರಲ್ಲೇ ಅಮೆರಿಕದ ನೂತನ ಅಧ್ಯಕ್ಷರಾಗಲಿರುವ ಡೊನಾಲ್ಡ್ ಟ್ರಂಪ್ ಸ್ಪೋಟಕ ವಿಷಯದ ಕುರಿತು ಮಾತನಾಡಿದ್ದಾರೆ. ಅವರ ಹೇಳಿಕೆ ನೆರೆಯ ಕೆನಡಾಕ್ಕೆ ಆತಂಕ ತಂದಿದೆ. ಅಮೆರಿಕದ ಜೊತೆಗೆ ವಿಲೀನಕ್ಕೆ ಒಪ್ಪದ ಕೆನಡಾದ ವಿರುದ್ಧ ಆರ್ಥಿಕ ಬಲ ಪ್ರಯೋಗಿಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕದ ರಾಜ್ಯವನ್ನಾಗಿ ಕೆನಡಾವನ್ನು ವಿಲೀನಗೊಳಿಸಲು ಒಪ್ಪದ ಕೆನಡಾದ ವಿರುದ್ದ ಮಿಲಿಟರಿ ಬಲವನ್ನು ಪ್ರಯೋಗಿಸುತ್ತೀರಾ ಬಲವನ್ನು ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಟ್ರಂಪ್ ‘ಇಲ್ಲ’ ಎಂದಿದ್ದಾರೆ. ‘ನಾನು ಆರ್ಥಿಕ ಬಲವನ್ನು ಪ್ರಯೋಗಿಸುತ್ತೇನೆ. ಇದು ರಾಷ್ಟ್ರೀಯ ಭದ್ರತೆಗೆ ಉತ್ತಮವಾಗಿರುತ್ತದೆ.ನಾವು
ಕೆನಡಾವನ್ನು ರಕ್ಷಿಸುತ್ತೇವೆ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.
ಗಲ್ಫ್ ಆಫ್ ಮೆಕ್ಸಿಕೋದ ಹೆಸರು ಗಲ್ಫ್ ಆಫ್ ಅಮೆರಿಕ ಆಗಿ ಬದಲು :
ಗಲ್ಫ್ ಆಫ್ ಮೆಕ್ಸಿಕೋ ಸಮುದ್ರದ ಹೆಸರನ್ನು ಗಲ್ಫ್ ಆಫ್ ಗಲ್ಫ್ ಆಫ್ ಮೆಕ್ಸಿಕೋ
ಅಮೆರಿಕ ಎಂದು ಮರುನಾಮಕರಣ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. ಗಲ್ಫ್ ಆಫ್ ಮೆಕ್ಸಿಕೋ ಸುಂದರವಾದ ರಿಂಗ್ನ ರೀತಿಯಲ್ಲಿದ್ದು, ಸಾಕಷ್ಟು ಪ್ರದೇಶಗಳ ವ್ಯಾಪ್ತಿ ಹೊಂದಿದೆ. ಹೀಗಾಗಿ ಈ ಸಮುದ್ರ ಭಾಗಕ್ಕೆ ಗಲ್ಫ್ ಆಫ್ ಅಮೆರಿಕ ಹೆಸರಿಡುವುದೇ ಸೂಕ್ತ ಎಂದಿದ್ದಾರೆ. ಅಮೆರಿಕ, ಮೆಕ್ಸಿಕೋ, ಕ್ಯೂಬಾದಂಥ ಉತ್ತರ ಅಮೆರಿಕದ ಪ್ರಮುಖ ರಾಷ್ಟ್ರಗಳಿಂದ ಆವರಿಸಿರುವ ಸಮುದ್ರ ಭಾಗವೇ ಗಲ್ಫ್ ಆಫ್ ಮೆಕ್ಸಿಕೋ. ಇದು ಅಮೆರಿಕದ ಪೆಟ್ರೋಲಿಯಂ ಹಬ್ ಆಗಿದೆ. ಅಮೆರಿಕದ ಸಮುದ್ರ ಆಹಾರದ ಶೇ.40ರಷ್ಟು ಮೆಕ್ಸಿಕೋ ಗಲ್ಫ್ ಮೂಲವಾಗಿದೆ.
ಗ್ರೀನ್ಲ್ಯಾಂಡ್, ಪನಾಮಾ ವಶಕ್ಕೆ ಸೇನೆಯ ಬಳಸಲೂ ಹಿಂಜರಿಯಲ್ಲ :
ಪ್ರಮುಖ ಸಮುದ್ರ ಮಾರ್ಗವಾದ ಪನಾಮ
ಕಾಲುವೆ ಮತ್ತು ತನ್ನ ಪ್ರಮುಖ ಸೇನಾ ನೆಲೆ ಇರುವ ಗ್ರೀನ್ ಲ್ಯಾಂಡ್ ಮೇಲಿನ ನಿಯಂತ್ರಣಕ್ಕಾಗಿ ಮಿಲಿಟರಿ ಶಕ್ತಿ ಬಳಕೆಗೂ ಹೇಸಲ್ಲ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಎರಡೂ ಪ್ರದೇಶಗಳು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಮುಖ್ಯವಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಪನಾಮ ಕಾಲುವೆಯು ಆರ್ಥಿಕವಾಗಿ ನಮ್ಮ ದೇಶದ ಪಾಲಿಗೆ ಮಹತ್ವದ್ದಾಗಿದೆ. ರಾಷ್ಟ್ರೀಯ ಭದ್ರತೆಯ ಕಾರಣಕ್ಕಾಗಿ ಗ್ರೀನ್ ಲ್ಯಾಂಡ್ ನ ಅಗತ್ಯವಿದೆ ಎಂದರು.
ಅಮೆರಿಕ ಜತೆ ವಿಲೀನ ಅಸಾಧ್ಯ: ಟ್ರುಡೊ
ಒಟ್ಟಾವ : ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಸಂಬಂಧ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಳ್ಳಿಹಾಕಿದ್ದಾರೆ.
ಕೆನಡಾವು ಅಮೆರಿಕದ ಜತೆ ವಿಲೀನವಾಗುವ ಸಾಧ್ಯತೆಯೇ ಇಲ್ಲ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಟ್ರುಡೊ ಅವರು ಸೋಮವಾರ ಘೋಷಿಸಿದ್ದರು. ಅದರ ಬೆನ್ನಲ್ಲೇ ಟ್ರಂಪ್, ಕೆನಡಾವನ್ನು ಅಮೆರಿಕದ ಜತೆ ವಿಲೀನಗೊಳಿಸುವ ಮಾತನ್ನಾಡಿದ್ದರು.
ಕೆನಡಾವನ್ನು ಅಮೆರಿಕದ ಜತೆ ಸೇರಿಸಲು ಸೇನಾ ಬಲವನ್ನು ಬಳಸುವಿರಾ ಎಂಬ ಪ್ರಶ್ನೆಗೆ ಟ್ರಂಪ್, ಸೇನಾ ಬಲ ಬಳಸುವುದಿಲ್ಲ. ಆರ್ಥಿಕ ಬಲವನ್ನು ಬಳಸಿ ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿಸಲಾಗುವುದುಎಂದಿದ್ದರು.
ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಈಚೆಗೆ ಹೇಳಿದ್ದರು.
ಟ್ರಂಪ್ ಹೇಳಿಕೆಯು ಕೆನಡಾದ ಸಾಮರ್ಥ್ಯದ ಬಗ್ಗೆ ಅವರ ತಿಳಿವಳಿಕೆಯ ಕೊರತೆಯನ್ನು ತೋರಿಸುತ್ತದೆ. ಯಾವುದೇ ಬೆದರಿಕೆಗೆ ನಾವು ಮಣಿಯುವುದಿಲ್ಲ ಎಂದು ಕೆನಡಾ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಪ್ರತಿಕ್ರಿಯಿಸಿದ್ದಾರೆ.