ಮಂಗಳೂರು: ಪ್ರವಾಸಕ್ಕೆ ಬಂದಿದ್ದ ನಾಲ್ವರು ಸ್ನೇಹಿತರು ಈಜಾಡಲು ನೀರಿಗೆ ಇಳಿದಿದ್ದಾರೆ. ಆಗ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಒಬ್ಬರನ್ನು ರಕ್ಷಿಸಲಾಗಿದೆ. ಬುಧವಾರ ಹೊಸಬೆಟ್ಟು ಬೀಚ್ ನಿರ್ಮಾಣ ಹಂತದ ಜೆಟ್ಟಿ ಬಳಿ ಬೀಚ್ ನಲ್ಲಿ ಈ ಘಟನೆ ಸಂಭವಿಸಿದೆ.
ಬೆಂಗಳೂರು ಜೆ.ಪಿ. ನಗರದ ಸತ್ಯವೇಲು(30), ಶಿವಮೊಗ್ಗದ ಶಿವಕುಮಾರ್, ಚಿತ್ರದುರ್ಗ ಜಿಲ್ಲೆ ಉಪ್ಪರಿಗೇನಹಳ್ಳಿಯ ಶಿವಲಿಂಗಪ್ಪ ಅವರ ಪುತ್ರ ಮಂಜುನಾಥ್ (31)ಮೃತಪಟ್ಟಿದ್ದಾರೆ. ಬೀದರ ಜಿಲ್ಲೆ ಹಂಗರಗಾದ ವಿಶ್ವಂಬರ್ ಅವರ ಪುತ್ರ ಪರಮೇಶ್ವರ್(30) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರ ಮೃತದೇಹ ಕಾರ್ಯಾಚರಣೆ ನಂತರ ಪತ್ತೆಯಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬೀಚ್ ಬಳಿ ಈ ಘಟನೆ ಸಂಭವಿಸಿದೆ.