ಬೆಳಗಾವಿ: ಬೆಳಗಾವಿ ಆರ್ ಪಿ ಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಜ್ಞಾನ ಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾಡಿನ ಖ್ಯಾತ ವಿದ್ವಾಂಸ ವಿದ್ವಾನ್ ರಘೋತ್ತಮಚಾರ್ಯ ನಾಗಸಂಪಿಗೆ ಅವರಿಂದ ಜ. 7 ರಿಂದ 12 ರವರೆಗೆ ಸಂಜೆ 6 ರಿಂದ 8 ಗಂಟೆವರೆಗೆ ಶ್ರೀ ರುಕ್ಮಿಣೀಶ ವಿಜಯ ಎಂಬ ವಿಷಯವಾಗಿ ಪ್ರವಚನ ನಡೆಯಲಿದೆ ಎಂದು ಶ್ರೀಕೃಷ್ಣ ಮಠದ ಪ್ರಕಟಣೆ ತಿಳಿಸಿದೆ.