ಬೆಳಗಾವಿ:
ಬೆಳಗಾವಿ ಗ್ರಾಮೀಣ ಕ್ಷೇತ್ರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಕುವೆಂಪು ನಗರದ ಆಜಾದ್ ಹೌಸಿಂಗ್ ಸೊಸೈಟಿ ಕಾಲೋನಿ ಈ ಪ್ರದೇಶದ ಚರಂಡಿ ಹಾಗೂ ರಸ್ತೆಗಳ ಸುಧಾರಣೆಗಾಗಿ ಮಹಾನಗರ ಪಾಲಿಕೆ ವತಿಯಿಂದ 1.75 ಕೋಟಿ ರೂ. ಗಳು ಮಂಜೂರಾಗಿದ್ದು, ಸ್ಥಳೀಯ ನಿವಾಸಿಗಳ ಸಮ್ಮುಖದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬುಧವಾರ ಭೂಮಿ ಪೂಜೆ ಕೈಗೊಂಡು ಕಾಮಗಾರಿಗಳಿಗೆ ಚಾಲನೆಯನ್ನು ನೀಡಿದರು.
ಮೂಲಸೌಲಭ್ಯಗಳ ಅಭಿವೃದ್ಧಿ ತಮ್ಮ ಪ್ರಥಮ ಆದ್ಯತೆಯಾಗಿದ್ದು ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸಗಳನ್ನು ಈಗಾಗಲೇ ಪೂರೈಸಲಾಗಿದೆ. ಇನ್ನು ಜನತೆಯ ಬೇಡಿಕೆಗಳಿಗೆ ಹೆಚ್ಚು ಮನ್ನಣೆ ನೀಡಿ ಮೂಲಸೌಕರ್ಯ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಗೋಪಿ ಹೆಗಡೆ, ಸಮೀರ ಶಿರಗುಪ್ಪಿ, ನಿರಜ್ ಹಾನಗಲ್, ವಿನಯ ಸಂಬರಗಿಮಠ, ಶಿಲ್ಪಾ ನಾಯ್ಕ, ವಿಕ್ರಾಂತ ಶಾನಭಾಗ, ಹರೀಶ್ ಚೊಣ್ಣದ, ಬೀನಾ ಸಂಬರಗಿಮಠ, ರೂಪಾ ಗುಡಿ, ರೋಹಿಣಿ ಪಾಟೀಲ, ಶ್ವೇತಾ ಶಾನಭಾಗ ಹಾಗೂ ಆಪ್ತ ಸಹಾಯಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.