ಬೆಳಗಾವಿ: ನಿವೃತ್ತ ಶಿಕ್ಷಕ, ಸಾಹಿತಿ ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಅತ್ಯಂತ ಸ್ನೇಹಪರ ವ್ಯಕ್ತಿತ್ವದ ಮೋಹನ ಕಳಸದ (80 ) ಇತ್ತೀಚೆಗೆ ನಿಧನರಾದರು. ಶಿಕ್ಷಕ ಸೇವೆಯಿಂದ ನಿವೃತ್ತರಾದ ನಂತರ ಕೆಲಕಾಲ ಅವರು ಪತ್ರಕರ್ತರಾಗಿ, ಸಾಹಿತಿಯಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಗುರುತಿಸಿಕೊಂಡಿದ್ದರು. ಅತ್ಯಂತ ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಮೋಹನ ಕಳಸದ ಅವರು ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.