ಬೆಳಗಾವಿ :
75 ವಸಂತಗಳನ್ನು ಪೂರ್ಣಗೊಳಿಸಿ 76 ಕ್ಕೆ ಪಾದಾರ್ಪಣೆ ಮಾಡಿದ ಬೆಳಗಾವಿಯ ಹಿರಿಯ ಸಾಹಿತಿ ಪ್ರಾ.ಬಿ.ಎಸ್.ಗವಿಮಠರಿಗೆ ಅವರ ಸ್ವಗೃಹದಲ್ಲಿ ದವಸಧಾನ್ಯಗಳ ತುಲಾಭಾರವನ್ನು ನೆರವೇರಿಸಲಾಯಿತು.
ಕನ್ನಡ ಸಾರಸ್ವತ ಲೋಕಕ್ಕೆ 40 ಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ನೀಡಿರುವ ಬಿ.ಎಸ್.ಗವಿಮಠರು ಬೆಳಗಾವಿಯ ಸಾಂಸ್ಕೃತಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಮಾತ್ರವಲ್ಲದೇ ಕೆಎಲ್ಇ ಸಂಸ್ಥೆಯ ಇತಿಹಾಸಕಾರರಾಗಿ, ಕೆಎಲ್ಇ ಪ್ರಸಾರಾಂಗದ ರೂವಾರಿಗಳಾಗಿ ಅಹರ್ನಿಶಿಯಾಗಿ ಶ್ರಮಿಸಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಮಾಜಿ ಕಾರ್ಯದರ್ಶಿ ಡಾ.ಎಫ್.ವ್ಹಿ.ಮಾನ್ವಿ
ಹೇಳಿದರು.
ಹಿರಿಯ ಸಾಹಿತಿ ಶಾಂತಾದೇವಿ ಹುಲೆಪ್ಪನವರಮಠ ಮಾತನಾಡಿ, ಗವಿಮಠರು ಒಬ್ಬ ಆದರ್ಶ ಶಿಕ್ಷಕರಾಗಿ ಅಪಾರ ಶಿಷ್ಯರಿಗೆ ಬೆಳಕಾದವರು. ಮಾತ್ರವಲ್ಲದೆ ತಮ್ಮ ಹರಿತವಾದ ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸಿದವರು. ಬೆಳಗಾವಿ ಕನ್ನಡ-ಕನ್ನಡಿಗ, ಕೆಎಲ್ಇ ನೂರರ ಸಿರಿಬೆಳಕು ಅವರ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿವೆ. ಜೀವನ ಚರಿತ್ರೆ, ಕವನ, ವ್ಯಕ್ತಿ ಚಿತ್ರಣಗಳನ್ನು ಅತ್ಯಂತ ಅದ್ಭುತವಾಗಿ ಕಟ್ಟಿಕೊಟ್ಟ ವ್ಯಕ್ತಿ ಮತ್ತೊಬ್ಬರಿಲ್ಲ. ಡಾ.ಪ್ರಭಾಕರ ಕೋರೆಯವರ ಕುರಿತು ಬಿ.ಎಸ್.ಗವಿಮಠರಿಗೆ ವಿಶೇಷ ಒಲವು. ಅವರ ಕುರಿತು ಐದು ಮಹತ್ವದ ಕೃತಿಗಳನ್ನು ರಚಿಸಿದವರು ಎಂದು ಹೇಳಿದರು.
ಡಾ.ಬಸವರಾಜ ಜಗಜಂಪಿ, ಡಾ.ಗುರುದೇವಿ ಹುಲೆಪ್ಪನವರಮಠ, ಏಣಗಿ ಸುಭಾಷ, ಬಸವರಾಜ ಗಾರ್ಗಿ, ಸುಗಂಧಾ ಗವಿಮಠ, ಈಶ್ವರ ಸ್ವಾಮಿ, ರಾಜೇಶ್ವರ ಸ್ವಾಮಿ, ರಾಮಯ್ಯ ಹಿರೇಮಠ, ಗೀತಾ ಹಿರೇಮಠ, ವಿಜಯಶಂಕರ ಅರಳಿಮಟ್ಟಿ, ನೀತಾ ಅರಳಿಮಟ್ಟಿ, ಡಾ.ಮಹೇಶ ಗುರನಗೌಡರ ಮೊದಲಾದವರು ಉಪಸ್ಥಿತರಿದ್ದರು.