CT ರವಿ ಕೇಸ್; ಬಾಗೇವಾಡಿ ಪಿಐ ಅನಾರೋಗ್ಯ: ಆಸ್ಪತ್ರೆಗೆ ದಾಖಲು..?
ನ್ಯಾಯಾಂಗ ನಿಂದನೆ ತೂಗುಗತ್ತಿಯಲ್ಲಿ ಬೆಳಗಾವಿ ಪೊಲೀಸರು ..?
ಕಾನೂನು ಅರಿತರೂ ಮಂತ್ರಿ ಒತ್ತಡಕ್ಕೆ ಮಣಿದ್ರಾ IPS ಅಧಿಕಾರಿಗಳು..?
ಬೆಳಗಾವಿ : ಮಂತ್ರಿಗಳ ಒತ್ತಡಕ್ಕೆ ಮಣಿದು ಬೆಳಗಾವಿ ಹಿರಿಯ ಪೊಲೀಸ್ ಅಧಿಕಾರಿಗಳು ಕಾನೂನು ಬಾಹಿರವಾಗಿ ಶಾಸಕ CT ರವಿ ಅವರನ್ನು ಬಂಧಿಸುವಂತೆ ಹೇರಿದ ಒತ್ತಡ ತಾಳಲಾರದೆ ಹಿರೇಬಾಗೇವಾಡಿ ಪಿಐ ರಮೇಶ ಪಾಟೀಲ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಕೆಎಲ್ಇ ಆಸ್ಪತ್ರೆ ಸೇರಿದ್ದಾಗಿ ತಿಳಿದು ಬಂದಿದೆ.ಮಾಹಿತಿ ಪ್ರಕಾರ ಅವರಿಗೆ ಬಿಪಿ ಕಡಿಮೆಯಾಗಿದೆ ಎಂದು ತಿಳಿದಿದೆ.
ನಿನ್ನೆ ಸುವರ್ಣ ಸೌಧದಲ್ಲಿ ನಡೆಯುತ್ತಿದ್ದ ಅಧಿವೇಶನದಲ್ಲಿ ಕೊನೆಯ ದಿನದಂದು ವಿಧಾನ ಪರಿಷತ್ತಿನಲ್ಲಿ ಮಂತ್ರಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಬಿಜೆಪಿ ಶಾಸಕ ಸಿ ಟಿ ರವಿ ಅಸಂವಿಧಾನಿಕ ಪದ ಬಳಿಸಿದ್ದಾರೆ ಎಂದು ಆರೋಪಿಸಿ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೆ ಆರೋಪಿ ಸಿ ಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಸುವರ್ಣ ಸೌಧದಿಂದ ವಶಕ್ಕೆ ಪಡೆದು ಖಾನಾಪೂರ ಠಾಣೆಗೆ ಕರೆದೊಯ್ದಿದ್ದರು. ನಂತರ ಅವರು ಕೂಡ ಮಂತ್ರಿ ಲಕ್ಷ್ಮೀ ಬೆಂಬಲಿಗರು ನನ್ನ ಮೇಲೆ ಸೌಧ ಒಳಗೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ. ಆದರೆ ಇಷ್ಟೆಲ್ಲಾ ನಡೆದ ಮೇಲೆ ಪೊಲೀಸರು ಮಾತ್ರ ಕಾನೂನು ಪ್ರಕಾರ ಕ್ರಮ ಕೈಗೊಳ್ಳದೇ ಸರ್ಕಾರದ ಒತ್ತಡಕ್ಕೆ ಮಣಿದು ಕಾನೂನು ಬಾಹಿರವಾಗಿ ಆರೋಪಿಯನ್ನು ಬಂಧಿಸಲು ಪಣ ತೊಟ್ಟಂತೆ ಕಾಣುತ್ತಿದೆ.
ಯಾಕೆಂದರೆ ನಿನ್ನೆ ಪರಿಷತ್ತಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಶಾಸಕ ಸಿ ಟಿ ರವಿ ಮೇಲೆ ಲೈಂಗಿಕ ಕಿರುಕುಳ ಮತ್ತು ಮಹಿಳೆಯೊಬ್ಬಳೊಂದಿಗೆ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿರುವ ಆರೋಪದಡಿ BNS ಕಲಂ 75 ,79 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಕಾಯ್ದೆ ಪ್ರಕಾರ ಪ್ರಕರಣದ ಶಿಕ್ಷೆ ಅವಧಿ 3 ವರ್ಷದ ತನಕ ಇರುವ ಕಾರಣ ಸುಪ್ರೀಂ ಕೋರ್ಟ್ ಆದೇಶದನ್ವಯ ಆರೋಪಿಯನ್ನು ಬಂಧಿಸುವಂತಿಲ್ಲ.
ಇಷ್ಟೆಲ್ಲಾ ಕಾನೂನು ಅರಿತಿರುವ ಬೆಳಗಾವಿ IPS ಅಧಿಕಾರಿಗಳು ಒಬ್ಬ ಶಾಸಕ, ಒಂದು ದೊಡ್ಡ ರಾಷ್ಟ್ರೀಯ ಪಕ್ಷದ ರಾಜ್ಯ ಮುಖಂಡರಾಗಿರುವ ರಾಜಕಾರಣಿಯನ್ನು ಕಿರಿಯ ಅಧಿಕಾರಿಗಳಿಗೆ ಆದೇಶ ನೀಡಿ ಬಂಧಿಸುವಂತೆ ಒತ್ತಾಯಿಸುತ್ತಿರುವುದು ತೀವ್ರ ಅಸಹ್ಯಕರವಾಗಿದೆ.
ಒಂದು ವೇಳೆ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಶಾಸಕನ್ನು ಬಂಧಿಸಿದರೇ, ಇದು ಕಾನೂನು ಬಾಹಿರ ಹಾಗೂ ನ್ಯಾಯಾಂಗ ನಿಂದನೆ ಆಗುತ್ತದೆ. ಇದರ ಮೇಲೆ ಬಂಧಿಸಿದ ಅಧಿಕಾರಿಗಳ ತಲೆದಂಡ ಪಕ್ಕಾ ಅಂತಾರೆ ವಕೀಲರು.
ಅದಕ್ಕಾಗಿ ಹಿರಿಯ ಅಧಿಕಾರಿಗಳು ಅಂತಹ ದೊಡ್ಡ ರಾಜಕಾರಣಿಯನ್ನು ತಾವು ಬಂಧಿಸಲು ಹೋಗದೆ, ತಮ್ಮ ಅಧೀನದಲ್ಲಿದ್ದ ಕಿರಿಯ ಅಧಿಕಾರಿಗಳಿಗೆ ಒತ್ತಡ ಹೇರಿ ಬಂಧಿಸುವಂತೆ ಕಾಡುತ್ತಿರುವುದಾಗಿ ಗೊತ್ತಾಗಿದೆ.
ಇದರಿಂದ ಬೆಳಗಾವಿ ಪೊಲೀಸ ಇಲಾಖೆ ಮಂತ್ರಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಇತ್ತ ನ್ಯಾಯಾಂಗ ತೂಗುಗತ್ತಿಯಲ್ಲೂ ಸಿಲುಕುವ ಭಯದಿಂದ ಬೇರೊಬ್ಬರ ಮೇಲೆ ಬೊಟ್ಟು ಮಾಡುತ್ತಿದ್ದಾರೆ.ಒಟ್ಟಿನಲ್ಲಿ CT ರವಿ ಕೇಸ್ ಯಾವ ತಿರುವು ಪಡೆಯುತ್ತೆ ಎಂದು ಕಾದು ನೋಡಬೇಕು.