ಸವದತ್ತಿ :
ಸವದತ್ತಿಯ ಸ್ವಾದಿಮಠದ ಶ್ರೀ ಶಿವಬಸವ ಮಹಾಸ್ವಾಮೀಜಿಯವರು ರವಿವಾರದಂದು ಮುಂಜಾನೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು.
ಸವದತ್ತಿಯಲ್ಲಿ ಪೂಜ್ಯರ ಅಂತಿಮ ದರ್ಶನಕ್ಕೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಡಾ . ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿಥಿಲ ಪೆಟ್ಟಿಗೆಗೆ ವ್ಯವಸ್ಥೆ ಮಾಡಲಾಗಿದೆ.
ಕೆ.ಎಲ್.ಇ ಬೆಳಗಾವಿಯಿಂದ ಡಾ . ರಾಮಣ್ಣವರ್ ಚಾರಿಟೇಬಲ್ ಟ್ರಸ್ಟ್ ಅಂಬುಲೆನ್ಸ್ ಮುಖಾಂತರ ಪೂಜ್ಯರ ಪಾರ್ಥಿವ ಶರೀರವನ್ನು ರವಿವಾರ ಸವದತ್ತಿಯ ಸ್ವಾದಿಮಠಕ್ಕೆ ತರಲಾಗುತ್ತಿದೆ . ಸ್ವಾದಿಮಠದಲ್ಲಿ 3 ಗಂಟೆವರೆಗೆ ಮಹಾಸ್ವಾಮೀಜಿಯವರ ಪಾರ್ಥಿವ ಶರೀರದ ದರ್ಶನವನ್ನು ಏರ್ಪಡಿಸಲಾಗಿದೆ. ನಂತರ ಅವರ ಪಾರ್ಥಿವ ಶರೀರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಮೂಲಕ ವಿಜಯಪುರ ಜಿಲ್ಲೆ ಕುದರಿ ಸಾಲವಾಡಗಿ ಗ್ರಾಮಕ್ಕೆ
ಬೀಳ್ಕೊಡಲಾಗುವುದು.
ಅಲ್ಲಿ ಭಕ್ತಾದಿಗಳಿಗೆ ಅಂತಿಮ ದರ್ಶನಕ್ಕೆ ಶ್ರೀ ಮಠದಲ್ಲಿ ಏರ್ಪಡಿಸಲಾಗಿದೆ . ಇಂದು ಸಂಜೆ ವಿಜಯಪುರ ಜಿಲ್ಲೆ ಕುದರಿ ಸಾಲವಾಡಗಿಯಲ್ಲಿ ಪೂಜ್ಯರ ಅಂತ್ಯಕ್ರಿಯೆ ನೆರವೇರಿಸಲಾಗುವುದು .