ನವದೆಹಲಿ: ಹಾರ್ದಿಕ್ ಪಾಂಡ್ಯ ಸರ್ಬಿಯಾದ ನತಾಶಾ ಜೊತೆಗಿನ ಡಿವೋರ್ಸ್ ಬಳಿಕ ಅಮೆರಿಕನ್ ಮಾಡೆಲ್ ಜೊತೆ ಮದುವೆಗೆ ಸಜ್ಜಾಗಿದ್ದರಂತೆ. ಈ ಕುರಿತಾದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾರ್ದಿಕ್ ಪಾಂಡ್ಯ, ನತಾಶಾ ಡಿವೋರ್ಸ್ ಆಗಿ ಜಸ್ಟ್ ಆರೇ 6 ತಿಂಗಳು ಕಳೆದಿದೆ. ಈ ಬೆನ್ನಲ್ಲೇ ಸ್ಟಾರ್ ಆಂಡರ್ ಪಾಂಡ್ಯ, ಮತ್ತೊಮ್ಮೆ ವೈಯಕ್ತಿಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಅದು ಕೂಡ ಮತ್ತೊಬ್ಬ ನಟಿಯೊಂದಿಗೆ. ಅಂದ್ದಾಗೆ ಆಕೆಯ ಹೆಸರು ಕೈಲಿ ಜೆನ್ನರ್.
ಕೈಲಿ ಜೆನ್ನರ್.. ಅಮೆರಿಕದ ನಟಿ, ಉದ್ಯಮಿ ಹಾಗೂ ಟಿವಿ ಸ್ಟಾರ್. ಜಗತ್ತಿನ ಸೌಂದರ್ಯ ಲೋಕದ ರಾಣಿಯರಲ್ಲಿ ಒಬ್ಬಳಾಗಿರುವ ಈಕೆ, ಸಾಮಾಜಿಕ ಕಾರ್ಯಕರ್ತೆ ಆಗಿದ್ದಾರೆ. 2007ರಲ್ಲಿ ಕೀಪಿಂಗ್ ಅಪ್ ವಿಥ್ ದಿ ಕಾರ್ಡಶಿಯಾನ್ಸ್ ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಕೈಲಿ, ಹಲವು ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬರೋಬ್ಬರಿ 395 ಮಿಲಿಯನ್ ಫಾಲೋವರ್ಗಳನ್ನ ಹೊಂದಿದ್ದಾರೆ.